ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಕ್ಷಿತಾ ಅವರ ತಮ್ಮನನ್ನು ಪರಿಚಯಿಸುತ್ತಿರುವ ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಹಾಗಂತ, ರಚಿತಾ ರಾಮ್ ಹೀರೋಯಿನ್ ಅಲ್ಲ, ಅರ್ಥಾತ್ ಹೀರೋನ ಪ್ರೇಯಸಿ ಅಲ್ಲ. ಆದರೆ, ಅತ್ಯಂತ ಪ್ರಮುಖವಾದ ಪಾತ್ರವಂತೆ.
ವಿಲನ್ ಚಿತ್ರದ ಹಾಡೊಂದರಲ್ಲಿ ನಾನು ನಟಿಸಿದ್ದೆ. ಆದರೆ, ಪ್ರೇಮ್ ಅವರ ಡೆಡಿಕೇಷನ್ ಬಹಳ ಇಷ್ಟವಾಗಿತ್ತು. ಅವರು ಬಹಳ ಒಳ್ಳೆಯ ನಿರ್ದೇಶಕ. ಅವರು ನನ್ನನ್ನು ಸೆಟ್‍ನಲ್ಲಿ ಗೌಡ್ತಿ ಅಂತಾ ಕರೀತಿದ್ರೆ, ನಾನು ಗೌಡಾ ಸರ್ ಅಂತ ಕೂಗ್ತಿದ್ದೆ. ಈ ಚಿತ್ರದಲ್ಲಿ ನನ್ನದು ಅತ್ಯಂತ ಮುಖ್ಯ ಪಾತ್ರ ಎಂದಿದ್ದಾರೆ ರಚಿತಾ ರಾಮ್.
ರಕ್ಷಿತಾ ಪ್ರೇಮ್ ಅವರ ಸೋದರ ರಾಣಾ ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಕ್ಷಿತಾ ಅವರೇ ಚಿತ್ರದ ನಿರ್ಮಾಪಕಿ.