ಶುಭಾ ಪೂಂಜಾ, ಕಾರುಣ್ಯ ರಾಮ್, ರಚನಾ.. ಮೊದಲಾದವರೆಲ್ಲ ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ ಶೃಂಗಾರ ಸಮಯ ಕಳೆಯುತ್ತಿದ್ದಾರೆ. ಅವರೆಲ್ಲ ದೇವಲೋಕದಿಂದ ಬಂದಿಳಿದ ಅಪ್ಸರೆಯರಂತೆ ಕಂಗೊಳಿಸಲಿದ್ದಾರೆ. ಎಲ್ಲವೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಕ್ಕಾಗಿ.
ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಹೀರೋ. ಪರ್ಪಲ್ ಪ್ರಿಯಾ, ಕವಿತಾ ಗೌಡ ನಾಯಕಿಯರು. ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಚುಟು ಚುಟು ಖ್ಯಾತಿಯ ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರದಲ್ಲಿ ಅಮಾಯಕ ವ್ಯಕ್ತಿಯೊಬ್ಬ ತನ್ನದಲ್ಲದ ತಪ್ಪಿಗೆ ಹೇಗೆಲ್ಲ ತೊಂದರೆಯಲ್ಲಿ ಸಿಕ್ಕಿಕೊಳ್ತಾನೆ ಎನ್ನುವ ಕಥೆ ಹೇಳಲಾಗಿದೆ.