ಐ ಲವ್ ಯೂ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ. ಉಪೇಂದ್ರ ಅಭಿಮಾನಿಗಳಂತೂ ಜೂನ್ 14ನ್ನ ಹಬ್ಬದಂತೆ ಆಚರಿಸಲು ಸಿದ್ಧರಾಗಿದ್ದಾರೆ.
ಸಿನಿಮಾ ಜೂನ್ 14ರಂದು ತ್ರಿವೇಣಿ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದೆ. ಅದೇ ಮೇಯ್ನ್ ಥಿಯೇಟರ್. ಅದಕ್ಕೂ ಮುನ್ನ ಜೂನ್ 10ರಂದು ಚಿತ್ರದ ಸ್ಪೆಷಲ್ ಕಟೌಟ್‍ನ್ನು ಮೆರವಣಿಗೆ ಮೂಲಕ ತಂದು ನಿಲ್ಲಿಸಲಿದ್ದಾರೆ. ಆ ದಿನ ಅಣ್ಣಮ್ಮ ದೇವಸ್ಥಾನದಿಂದ ತ್ರಿವೇಣಿ ಚಿತ್ರಮಂದಿರದವರಗೆ ಕಟೌಟ್ ಮೆರವಣಿಗೆ ನಡೆಯಲಿದೆ.
ಚಿತ್ರದ ಮೊದಲ ಟಿಕೆಟ್‍ನ್ನು ಹರಾಜಿಗಿಡಲಾಗುತ್ತಿದ್ದು, ಟಿಕೆಟ್‍ನ್ನು ಹರಾಜಿನಲ್ಲಿ ಖರೀದಿಸಬಹುದು. ಆ ಹಣವನ್ನು ಅನಾಥಾಶ್ರಮವೊಂದಕ್ಕೆ ನೀಡಲು ನಿರ್ಧರಿಸಲಾಗಿದೆ.
ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಅಭಿನಯಿಸಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕ ಹಾಗೂ ನಿರ್ಮಾಪಕ.