ಐ ಲವ್ ಯೂ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಸೀನ್‍ಗಳಿವೆ. ರಚಿತಾ ರಾಮ್ ಹಿಂದೆಂದೂ ಇಷ್ಟು ಹಾಟ್ ಆಗಿ ಕಾಣಿಸಿಕೊಂಡಿರಲಿಲ್ಲ. ಅದೇನದು.. ಸೋನು ಗೌಡರ ಪಾತ್ರ, ಥೇಟು 100% ಗೃಹಿಣಿ. ಆ ಬೋಲ್ಡ್‍ನೆಸ್‍ಗೂ, ಇದಕ್ಕೂ ತದ್ವಿರುದ್ಧ ಇದೆಯಲ್ಲ. ಉಪೇಂದ್ರ ಕಾಲೇಜ್ ಸ್ಟೂಡೆಂಟು, ಕ್ರಿಕೆಟ್ ಪ್ಲೇಯರು, ಬ್ಯುಸಿನೆಸ್‍ಮ್ಯಾನು, ಪ್ರೇಮಕ್ಕೆ ಅಂಗಲಾಚುವ ಯುವಕ.. ಏನಿದೆಲ್ಲ..
ಹೀಗೆ ಐ ಲವ್ ಯೂ ಟ್ರೇಲರ್ ನೋಡಿದವರ ಮನದಲ್ಲಿ ಮೂಡುತ್ತಿರೋ ಪ್ರಶ್ನೆಗಳಿವು. ಬೋಲ್ಡ್ ಸೀನ್ ನೋಡಿದವರಿಗೆ ಕಾಡ್ತಿರೋ ಪ್ರಶ್ನೆ ಒಂದೇ. ಫ್ಯಾಮಿಲಿ ಜೊತೆ ಬರಬಹುದಾ ಅನ್ನೋದು. ನಿರ್ದೇಶಕ ಆರ್.ಚಂದ್ರು ಆ ಪ್ರಶ್ನೆಗೆ ಕೊಡೋ ಯೆಸ್. ಆ ಕೆಲವು ದೃಶ್ಯಗಳು ಚಿತ್ರದಲ್ಲಿವೆ.ಅವು ಏಕೆ ಬರುತ್ತವೆ ಅನ್ನೋದು ಸಿನಿಮಾ ನೋಡಿದ ಮೇಲೆ ನಿಮಗೇ ಗೊತ್ತಾಗುತ್ತೆ ಎನ್ನುತ್ತಾರೆ ಚಂದ್ರು.
ಅಷ್ಟೆ ಅಲ್ಲ, ಸಿನಿಮಾ ನೋಡಿ ಮನೆಗೆ ಬಂದ ಮೇಲೆ ನಾವು ಯಾರನ್ನು ಪ್ರೀತಿ ಮಾಡಬೇಕು, ನಮ್ಮನ್ನು ಪ್ರೀತಿಸುತ್ತಿರೋದು ಯಾರು ಎಂಬ ಬಗ್ಗೆ ನಾವು ಖಂಡಿತಾ ಯೋಚನೆ ಮಾಡ್ತೇವೆ ಎನ್ನುವ ಭರವಸೆ ಚಂದ್ರು ಕಡೆಯಿಂದ ಬರುತ್ತೆ.