ಮದುವೆಯಾಗಿ, ಕೆಲವು ತಿಂಗಳು ಆರಾಮಾಗಿದ್ದ ಬಳಿಕ ಮೇಘನಾ ರಾಜ್ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ. ಒಂದರ ಹಿಂದೊಂದು ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರೀಗ ಒಂಟಿಯಾಗಿದ್ದಾರೆ.
ಒರಟ ಐ ಲವ್ ಯೂ ಸಿನಿಮಾದ ಬಳಿಕ ನಿರ್ದೇಶಕ ಶ್ರೀ ನಿರ್ದೇಶಿಸುತ್ತಿರುವ ಚಿತ್ರವಿದು. ಸಿನಿಮಾದಲ್ಲಿ ಮೇಘನಾ, ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಹುಡುಗಿಯ ಪಾತ್ರವಾದರೂ ಡಿಫರೆಂಟ್ ಲುಕ್, ಗೆಟಪ್ ನನಗಿದೆ ಎನ್ನುತ್ತಾರೆ ಈಗಲೂ ಸ್ವೀಟ್ ಸಿಕ್ಸ್ಟೀನ್ರಂತೆಯೇ ಕಾಣುವ ಮೇಘನಾ.
ಈ ಸಂಜೆ ಚಿತ್ರದ ಹೀರೋ ಆರ್ಯ ಕಥಾ ನಾಯಕ. ಭೂಗತ ಜಗತ್ತು, ಲವ್ ಸ್ಟೋರಿ ಎಲ್ಲವೂ ಇರುವ ಮಾಸ್ & ಕ್ಲಾಸ್ ಸಿನಿಮಾ ಎನ್ನುವುದು ನಿರ್ದೇಶಕರ ಭರವಸೆ.