ಐ ಲವ್ ಯೂ ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್‍ನಲ್ಲಿ ಸೋನು ಗೌಡ ಅವರನ್ನು ನೋಡಿದ ಕಿಚ್ಚ ಸುದೀಪ್, ಏನಿದು ಅಚ್ಚರಿ, ಏನು ಕಥೆ ಎಂದಿದ್ದಾರೆ. ಸೋನುಗೆ ಮೆಚ್ಚುಗೆ ಸಿಕ್ಕಿದೆ. ಆದರೆ, ಚಿತ್ರದ ಮೊದಲ ಟೀಸರ್, ಪೋಸ್ಟರ್, ಟ್ರೇಲರುಗಳಲ್ಲಿ ಸೋನು ಗೌಡ ಇರಲಿಲ್ಲ. ಏಕೆ ಎಂದರೆ, ಅದನ್ನು ನಿರ್ದೇಶಕರು ಹೇಳಿದ್ದರು. ಹಾಗಾಗಿ ನನಗೇನೂ ಬೇಸರವಿಲ್ಲ ಎಂದಿದ್ದಾರೆ ಸೋನು ಗೌಡ.
ಚಿತ್ರದ ಮುಖ್ಯ ಭೂಮಿಕೆಯಲ್ಲಿರೋದು ಉಪೇಂದ್ರ ಮತ್ತು ರಚಿತಾ ರಾಮ್. ಅವರ ಮೇಲೆಯೇ ಇಡೀ ಕಥೆ ಫೋಕಸ್ ಆಗಿದೆ. ಆದರೆ, ನನ್ನದು ಚಿತ್ರದ ಅತ್ಯಂತ ಪ್ರಮುಖವಾದ ಪಾತ್ರ. ಒಂದು ರೀತಿಯಲ್ಲಿ ನನ್ನದು ಚಿತ್ರದ ಹೃದಯದಂತಾ ಪಾತ್ರ ಎಂಬ ಭರವಸೆ ಸೋನು ಅವರದ್ದು.
ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ಅತಿ ಹೆಚ್ಚು ನೆನಪಿಸಿಕೊಳ್ಳೋದು ನನ್ನನ್ನೇ ಎಂಬ ಭರವಸೆಯಲ್ಲಿಯೇ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ ಸೋನು ಗೌಡ.