` ಬಂದ.. ಬಂದ.. ಬಂದ.. ಅವನೇ ಶ್ರೀಮನ್ನಾರಾಯಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
avane srimmanrayana teaser out
Avane Srimannarayana

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಅವನೇ ಶ್ರೀಮನ್ನಾರಾಯಣದ ಟೀಸರ್ ಹೊರಬಿದ್ದಿದೆ. ರಾಕ್ಷಸರನ್ನು ಕೊಲ್ಲಲು ನಮ್ಮೊಳಗಿನ ರಾಕ್ಷಸನನ್ನು ಮೊದಲು ಕೊಂದುಹಾಕಬೇಕು ಎಂಬ ವಾಯ್ಸ್ ಓವರ್‍ನೊಂದಿಗೆ ಶುರುವಾಗುವ ಟೀಸರ್ ನೋಡಿದರೆ, ಕಥೆ ಖಂಡಿತಾ ಗೊತ್ತಾಗಲ್ಲ.

3 ವರ್ಷಗಳ ನಂತರ ರಕ್ಷಿತ್ ಶೆಟ್ಟಿಯನ್ನು ತೆರೆಗೆ ತರುತ್ತಿರುವ ಚಿತ್ರವಿದು. ಸಚಿನ್ ನಿರ್ದೇಶನದ ಚಿತ್ರದ ಟೀಸರ್ ಪಕ್ಕಾ ಮಾಸ್ ಆ್ಯಕ್ಷನ್ ಸಿನಿಮಾ ಇರಬಹುದು ಎನಿಸುತ್ತದೆಯಾದರೂ, ಬೇರೇನೋ ಇದೆ ಎಂಬ ಕುತೂಹಲವನ್ನೂ ಹುಟ್ಟಿಸುತ್ತೆ. 

ಶಾನ್ವಿ ಶ್ರೀವತ್ಸವ್ ನಾಯಕಿಯಾಗಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆಗುವ ಸಾಧ್ಯತೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery