` ರಾಧಾ-ರಮೇಶ್ ಗಂಡ ಹೆಂಡತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika to pair opposite ramesh aravind
Radhika, Ramesh Aravind

ರಮೇಶ್ ಅರವಿಂದ್‍ಗೆ ಹೊಸ ಪತ್ನಿ ಸಿಕ್ಕಿದ್ದಾರೆ. ಛೆ.. ಅವರಂತಹವರಲ್ಲ ಬಿಡಿ ಅನ್ನಬೇಡಿ. ನಾವ್ ಹೇಳ್ತಿರೋದು ಒನ್ಸ್ ಎಗೇಯ್ನ್ ಸಿನಿಮಾ ಬಗ್ಗೆನೇ. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ರಮೇಶ್ ಅರವಿಂದ್‍ಗೆ ಜೋಡಿಯಾಗಿ ನಟಿಸುತ್ತಿರುವುದು ರಾಧಿಕಾ ಚೇತನ್.

ರಮೇಶ್ ಚಿತ್ರದಲ್ಲಿ ಪತ್ತೇದಾರನಾಗಿದ್ದರೆ, ಅವರ ಪತ್ನಿ ಲಾಯರ್ ಜನನಿಯಾಗಿ ನಟಿಸುತ್ತಿರುವುದು ರಾಧಿಕಾ ಚೇತತ್. ಆಕಾಶ್ ಶ್ರೀವತ್ಸ ನಿರ್ದೇಶನದ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಗಡ್ಡಧಾರಿಯಾಗಿ ಹಾಗೂ ಕ್ಲೀನ್ ಶೇವ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಕೆ ಅನ್ನೋ ರಹಸ್ಯವನ್ನು ಸಿನಿಮಾದಲ್ಲಿ ಬಹಿರಂಗಪಡಿಸಲಿದ್ದಾರಂತೆ ಆಕಾಶ್ ಶ್ರೀವತ್ಸ. ಚಿತ್ರಕ್ಕೆ ರೇಖಾ, ಕೆ.ಎನ್.ಅನೂಪ್ ಗೌಡ ನಿರ್ಮಾಪಕರು.

Phailwaan Audio Release Gallery

Rightbanner02_gimmick_inside

Nanna Prakara Audio Release Images