ಶ್ರೀಮುರಳಿ, ಡೈರೆಕ್ಟರ್‍ಗಳ ಪಾಲಿಗೆ ಅಡ್ಜಸ್ಟ್‍ಮೆಂಟ್ ಹೀರೋ. ನಿರ್ದೇಶಕರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವ ನಟ. ಇಂತಹವರನ್ನು ನಿರ್ದೇಶಕರೊಬ್ಬರು ಹೊಡೆಯೋಕೆ ಸ್ಕೆಚ್ ಹಾಕಿದ್ರಂತೆ ಎಂದರೆ ಅಚ್ಚರಿಯಾಗಬಹುದು. ಆದರೆ, ಇದು ಸತ್ಯ. ಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದವರು ಬೇರೆ ಯಾರೋ ಅಲ್ಲ, ಉಗ್ರಂ ಮೂಲಕ ಶ್ರೀಮುರಳಿಗೆ ಅತಿ ದೊಡ್ಡ ಬ್ರೇಕ್ ಕೊಟ್ಟ, ಕೆಜಿಎಫ್ ಮೂಲಕ ದೇಶಾದ್ಯಂತ ಭರ್ಜರಿ ಸದ್ದು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್.
ಅವರ್ಯಾಕೆ ಇವರನ್ನು ಹೊಡೆಯಬೇಕು ಎಂದರೆ, ಅದರ ಹಿಂದೊಂದು ಲವ್ ಸ್ಟೋರಿ ಇದೆ. ಶ್ರೀಮುರಳಿ ಲವ್ ಮಾಡ್ತಾ ಇದ್ದದ್ದು ಪ್ರಶಾಂತ್ ಅವರ ತಂಗಿಯನ್ನ. ಇದು ಗೊತ್ತಾಗಿ ಪ್ರಶಾಂತ್ ಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದರಂತೆ. ಆಗ ಮುರಳಿ ತಪ್ಪಿಸಿಕೊಂಡು ಓಡಾಡ್ತಿದ್ದರಂತೆ. ಅದಾದ ಮೇಲೆ ಪ್ರಶಾಂತ್ ಅವರ ತಂಗಿ ವಿದ್ಯಾರನ್ನೇ ಮುರಳಿ ಮದುವೆಯಾದರು. ಈಗ ಪ್ರಶಾಂತ್ ನೀಲ್‍ಗೆ ಶ್ರೀಮುರಳಿ ಭಾವ.
ಭಾವನಿಗೆ ವರದಕ್ಷಿಣೆಯಾಗಿ ಅವರು ಕೊಟ್ಟಿದ್ದು ಉಗ್ರಂ ಚಿತ್ರವನ್ನ.