` ರಿಲೀಸ್‍ಗೂ ಮೊದಲೇ ಕುರುಕ್ಷೇತ್ರಕ್ಕೆ 20 ಕೋಟಿ ಬ್ಯುಸಿನೆಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kurushetra does 20 crore business even before the release
Darshan Image From Kurukshetra

ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕನ್ನಡದ ಅತ್ಯಂತ ಅದ್ಧೂರಿ ಸಿನಿಮಾ ಎನ್ನುವುದರಲ್ಲಿ ಅನುಮಾನವಿಲ್ಲ. ವಿಶೇಷವೆಂದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದರೆ, ಇನ್ನೂ ಎರಡೂವರೆ ತಿಂಗಳ ನಂತರ ರಿಲೀಸ್ ಆಗುತ್ತಿರುವ ಚಿತ್ರ ಆಗಲೇ 20 ಕೋಟಿ ಬ್ಯುಸಿನೆಸ್ ಮಾಡಿದೆ.

ಕುರುಕ್ಷೇತ್ರ ಚಿತ್ರದ ಹಿಂದಿ ಸ್ಯಾಟಲೈಟ್ ಹಕ್ಕು ಹಾಗೂ ಕನ್ನಡ ಟಿವಿ ರೈಟ್ಸ್ ತಲಾ ಒಂಭತ್ತೂವರೆ ಕೋಟಿಗೆ ಮಾರಾಟವಾಗಿದ್ದರೆ, ಆಡಿಯೋ ಹಕ್ಕುಗಳನ್ನು ಒಂದೂವರೆ ಕೋಟಿಗೆ ಸೇಲ್ ಮಾಡಿದ್ದಾರೆ ನಿರ್ಮಾಪಕ ಮನಿರತ್ನ. ಉಳಿದಂತೆ ಇತರೆ ಭಾಷೆಗಳ ಸ್ಯಾಟಲೈಟ್ ರೈಟ್ಸ್, ಆನ್‍ಲೈನ್ ರೈಟ್ಸ್ ಹಾಗೂ ಡಿಸ್ಟ್ರಿಬ್ಯೂಷನ್ ರೈಟ್ಸ್, ಇನ್ನೂ ಶುರುವಾಗಬೇಕಿದೆ. ಒಟ್ಟಿನಲ್ಲಿ ಕನ್ನಡದ ಐತಿಹಾಸಿಕ ಚಿತ್ರವೊಂದು ದಾಖಲೆ ಬರೆಯಲು ರೆಡಿಯಾಗುತ್ತಿದೆ.

Kurukshetra Celebrity Show Gallery

Rightbanner02_gimmick_inside

Nanna Prakara Movie Images