ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಡವನಾಗಿದ್ದಾರೆ. ಕೊಡವರೆಂದರೆ, ತಕ್ಷಣ ನೆನಪಾಗುವುದು ಜನರಲ್ ಕಾರಿಯಪ್ಪ, ತಿಮ್ಮಯ್ಯ. ಸಿನಿಮಾದಲ್ಲಿ ಕೊಡವರೆಂದರೆ ತಕ್ಷಣ ನೆನಪಾಗೋದು ಮುತ್ತಿನ ಹಾರ. ಕೊಡವರ ವೀರ.. ಹುಲಿ ಕೊಂದ ಧೀರ ಹಾಡು. ಈ ಬಾರಿ ಕೊಡವನಾಗಿ ಮುಂದೆ ಬಂದಿದ್ದಾರೆ ದರ್ಶನ್. ತಮ್ಮ ಅಮರ್ ಚಿತ್ರಕ್ಕಾಗಿ ದರ್ಶನ್ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.
ಜೋರು ಪಾರು ಆಟ ಆಡೋಣ.. ಎಂಬ ಹಾಡು, ಸಂಪೂರ್ಣ ಕೊಡವ ಭಾಷೆಯಲ್ಲೇ ಇರುವುದು ವಿಶೇಷ. ಕಿರಣ್ ಕಾವೇರಪ್ಪ ಬರೆದಿರೋ ಹಾಡಿಗೆ ಧ್ವನಿ ನೀಡಿರುವುದು ಜೆಸ್ಸಿ ಗಿಫ್ಟ್. ಅರ್ಜುನ್ ಜನ್ಯ ಸಂಗೀತದ ಹಾಡು ಅದ್ಭುತವಾಗಿದೆ ಅನ್ನೋದು ನಿರ್ದೇಶಕ ನಾಗಶೇಖರ್ ಸರ್ಟಿಫಿಕೇಟ್. ನಾಗಶೇಖರ್ ನಿರ್ದೇಶನದ ಚಿತ್ರಗಳಲ್ಲಿ ಹಾಡು ಕೇಳುವಂತಿರುತ್ತವೆ ಹಾಗೂ ಕಣ್ಣು ಮಿಸುಕದೆ ನೋಡುವಂತಿರುತ್ತವೆ. ಹೀಗಾಗಿ ಹಾಡು ಹೇಗೆ ಬಂದಿರಬಹುದು ಅನ್ನೋ ಕುತೂಹಲ ಕನ್ನಡಿಗರಿಗೂ ಇದೆ.