` ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಲೇಟು. ಏನ್ ಕಾರಣ ಗೊತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dela in kgf chapter 2 shooting
KGF Movie Image

ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ಚಾಪ್ಟರ್ 2 ಭಯಂಕರ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಚಾಪ್ಟರ್ 2 ಬಗ್ಗೆ ನಿರೀಕ್ಷೆಗಳೂ ಮೌಂಟ್ ಎವರೆಸ್ಟ್ ಎತ್ತರದಲ್ಲಿವೆ. ಇನ್ನು ಚಿತ್ರದ ಕೆಲವು ಪಾತ್ರಗಳಿಗಾಗಿ ಭರ್ಜರಿಯಾಗಿಯೇ ಅಡಿಷನ್ ನಡೆಸಿದೆ ಕೆಜಿಎಫ್ ಟೀಂ. ಆದರೆ, ಶೂಟಿಂಗ್ ಮಾತ್ರ ಇನ್ನೂ ಶುರುವಾಗಿಲ್ಲ. 

ಕೆಜಿಎಫ್ ಶೂಟಿಂಗ್ ವಿಳಂಬಕ್ಕೆ ಏನು ಕಾರಣ ಎಂದು ಹುಡುಕುತ್ತಾ ಹೋದರೆ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಸೆಟ್ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬವೇ ಶೂಟಿಂಗ್ ವಿಳಂಬಕ್ಕೂ ಕಾರಣ ಎನ್ನಲಾಗುತ್ತಿದೆ. 

ನಿರ್ದೇಶಕ ಪ್ರಶಾಂತ್ ನೀಲ್, ವಿಭಿನ್ನ ಕಲ್ಪನೆಯ ಸೆಟ್ ಹಾಕಿಸುತ್ತಿದ್ದು, ಅದು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಕೇಳುತ್ತಿದೆಯಂತೆ. ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ, ಕ್ವಾಲಿಟಿಯಲ್ಲಿ ನೋ ಕಾಂಪ್ರಮೈಸ್ ಎಂದಿದ್ದಾರೆ. ಯಶ್ ಕೂಡಾ ಚೆನ್ನಾಗಿ ಬರುವವರೆಗೆ ಕಾಯೋಣ ಎನ್ನುತ್ತಿದ್ದಾರಂತೆ. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ವಿಳಂಬವಾಗುತ್ತಿದೆ.