ಅಮರ್ ಚಿತ್ರ ರಿಲೀಸ್‍ಗೆ ರೆಡಿಯಾಗಿರುವಾಗಲೇ, ಆ ಚಿತ್ರದಲ್ಲಿನ ಒಂದು ಹಾಡು ಕುತೂಹಲ ಹುಟ್ಟಿಸುತ್ತಿದೆ. ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಚಿತ್ರದಲ್ಲಿ ದರ್ಶನ್, ರಚಿತಾ ರಾಮ್ ಗೆಸ್ಟ್ ರೋಲ್‍ಗಳಲ್ಲಿದ್ದಾರೆ. ಅವರು ಈ ಚಿತ್ರದಲ್ಲಿ ಜೋಡಿಯೂ ಹೌದು. ಈ ಜೋಡಿಗೊಂದು ಹಾಡಿದೆ. ಆ ಹಾಡು ಕೊಡವರ ಶೈಲಿಯಲ್ಲಿದೆ ಅನ್ನೋದು ವಿಶೇಷ.
ನಿರ್ದೇಶಕ ನಾಗಶೇಖರ್, ಹಾಡನ್ನು ವಿಭಿನ್ನವಾಗಿ ಚಿತ್ರೀಕರಿಸಿದ್ದು, ಹಾಡಿಗೆ ಬುಲ್‍ಬುಲ್ ಜೊತೆ ಹೆಜ್ಜೆ ಹಾಕಿದ್ದಾರಂತೆ ದರ್ಶನ್. ಹಾಡು ಬರೆದಿರುವುದು ಕಿರಣ್ ಕಾವೇರಪ್ಪ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡಿಗೆ ದನಿಯಾಗಿರುವುದು ಮತ್ತೊಬ್ಬ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್.
ವಿಶೇಷಗಳ ಸರಮಾಲೆಯನ್ನೇ ಹೊತ್ತು ತರುತ್ತಿರುವ ಅಮರ್ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗ ಮತ್ತು ಕನ್ನಡಿಗರಿಗೆ ಭಾರಿ ನಿರೀಕ್ಷೆಯಿರುವುದು ಸುಳ್ಳಲ್ಲ.