ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಮದುವೆಯಾಗಲೆಂದೇ ಓಡಾಡಿದ್ದ ರಾಜ್ ಬಿ.ಶೆಟ್ಟಿ, ಈಗ ಮತ್ತೊಮ್ಮೆ ಮದುವೆಯಾಗೋಕೆ ರೆಡಿಯಾಗುತ್ತಿದ್ದಾರೆ. ರಿಯಲ್ ಲೈಫಲ್ಲಿ ಅಲ್ಲ, ರೀಲ್‍ನಲ್ಲಿ. ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ರಾಜ್ ಬಿ.ಶೆಟ್ಟಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಈ ಚಿತ್ರದಲ್ಲಿಯೂ ಅಷ್ಟೆ, ಚಿತ್ರದ ಕಥೆ ಸುತ್ತುವುದು ನಾಯಕನ ಮದುವೆ ಸುತ್ತಲೇ.
ರಾಜ್ ಬಿ.ಶೆಟ್ಟಿಯವರದ್ದು ವೆಂಕಟ್ ಕೃಷ್ಣ ಗುಬ್ಬಿ ಅನ್ನೋ ಹೆಸರಿನ ಪಾತ್ರ. ಹೀರೋಯಿನ್ ಆಗಿ ನಟಿಸ್ತಿರೋದು ಕವಿತಾ ಗೌಡ. ಅದೇ ಬಿಗ್‍ಬಾಸ್ ಖ್ಯಾತಿಯ ಕವಿತಾ.
ಕವಿತಾ ಅವರದ್ದಿಲ್ಲಿ ಪರ್ಪಲ್ ಪ್ರಿಯಾ ಅನ್ನೋ ಹೆಸರಿನ ಹಡುಗಿಯ ಪಾತ್ರ. ಮದುವೆ ಅಂದ್ರೆ ನೋಡೋಣ ಎಂದುಕೊಂಡು ಸುಮ್ಮನಿರುವ ಹುಡುಗಿಯ ಹಿಂದೆ ಗುಬ್ಬಿ ಬೀಳ್ತಾನೆ. ಮುಂದೇನು..? ಅದೇ ಚಿತ್ರದ ಕಥೆ.
ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರ, ಜೂನ್ ಆರಂಭದಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.