` ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rashmika to make bollywood debut ?
Rashmika Mandanna, Sanjau Leela Bansali

ಕನ್ನಡ, ತೆಲುಗು ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ತಮಿಳಿಗೂ ಲಗ್ಗೆಯಿಟ್ಟಿರುವ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್ ಬಾಗಿಲು ತೆರೆಯುತ್ತಿದೆ. ಅದೂ ಸಣ್ಣ ಪುಟ್ಟ ಚಿತ್ರ ನಿರ್ದೇಶಕರೇನಲ್ಲ, ಬಾಲಿವುಡ್‍ನ ಶೋಮ್ಯಾನ್, ಸೆನ್ಸೇಷನಲ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ.

ಬನ್ಸಾಲಿ ಬಗ್ಗೆ ಹೊಸದಾಗಿ ಹೇಳುವಂತದ್ದೇನಿಲ್ಲ. ದೇವದಾಸ್, ಪದ್ಮಾವತ್, ರಾಮ್‍ಲೀಲಾ, ಹಮ್ ದಿಲ್ ದೆ ಚುಕೇಸನಮ್, ಖಾಮೋಶಿ, ಬ್ಲಾಕ್, ಗುಜಾರಿಶ್, ಸಾವರಿಯಾ, ಬಾಜಿರಾವ್ ಮಸ್ತಾನಿ.. ಹೀಗೆ ಒಂದಕ್ಕಿಂತ ಒಂದು ಕ್ಲಾಸ್ ಚಿತ್ರಗಳನ್ನು ಕೊಟ್ಟಿರುವ ಡೈರೆಕ್ಟರ್.

ಮೂಲಗಳ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಲಾಗಿದೆಯಂತೆ. ಮಾತುಕತೆಗಳು ನಡೆಯುತ್ತಿವೆ. ಫೈನಲೈಸ್ ಆಗಿಲ್ಲ. 

ಅದೂ ಆಗಿಬಿಟ್ಟರೆ... ರಶ್ಮಿಕಾ ಮಂದಣ್ಣ ಇಂಡಿಯನ್ ಕ್ರಶ್ ಆಗಲಿದ್ದಾರೆ.

Gara Gallery

Rightbanner02_butterfly_inside

Paddehuli Movie Gallery