` "ಅಸಿಂಕೋಜಿಲ್ಲ" ಇದು ಕನ್ನಡ ಸಿನಿಮಾ ಹೆಸರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
honnavalli krishna's next movie has different ovie name
Honnavalli Krishna

ಅಸಿಂಕೋಜಿಲ್ಲ.. ಇಂಥಾದ್ದೊಂದು ಪದವನ್ನು ಎಂದಾದರೂ ಕೇಳಿದ್ದೀರಾ..? ಓದಿದ್ದೀರಾ..? ಯಾವುದಾದರೂ ಡಿಕ್ಷನರಿಯಲ್ಲಿ ಈ ಪದಕ್ಕೆ ಅರ್ಥವಿದೆಯಾ..? ಹೀಗೆ ಹಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿದರೂ, ಉತ್ತರ ಇಲ್ಲ ಎನ್ನುವುದೇ ಇರುತ್ತೆ. ಹೀಗೆ ಅರ್ಥವೇ ಇಲ್ಲದ ಪದವೊಂದನ್ನು ಚಿತ್ರಕ್ಕೆ ಟೈಟಲ್ ಆಗಿ ಇಟ್ಟಿದ್ದಾರೆ. ಅಸಿಂಕೋಜಿಲ್ಲ ಅನ್ನೋದು ಕನ್ನಡದ ಹೊಸ ಚಿತ್ರವೊಂದರ ಹೆಸರು.

ನಮ್ಮ ಚಿತ್ರದ ಟೈಟಲ್‍ಗೆ ನೀವು ಎಲ್ಲಿ ಹುಡುಕಿದರೂ ಅರ್ಥ ಸಿಗಲ್ಲ. ಆದರೆ, ಅದಕ್ಕೆ ಅರ್ಥ ಸಿನಿಮಾದಲ್ಲಿ ಸಿಗುತ್ತೆ ಎನ್ನುತ್ತಾರೆ ನಿರ್ದೇಶಕ ಮಂಜುನಾಥ್. ವಿಜ್ಞಾನಿಯೊಬ್ಬ ಜಗತ್ತಿಗೆ ಒಳ್ಳೆಯದು ಮಾಡಲು ಕಾಡಿಗೆ ಹೋಗಿ ಒಂದು ಸಾಹಸಕ್ಕೆ ಕೈ ಹಾಕ್ತಾನೆ. ಆತನೊಂದಿಗೆ ಇನ್ನೂ ನಾಲ್ವರು ಸೇರಿಕೊಳ್ತಾರೆ. ಜೊತೆಗೊಂದು ಸಮಸ್ಯೆಗೆ ಸಿಕ್ಕಿ ಕೊಳ್ತಾರೆ. ಆ ಸಮಸ್ಯೆಯಿಂದ ಅವರು ಹೇಗೆ ಪಾರಾಗ್ತಾರೆ ಅನ್ನೋದು ಚಿತ್ರದ ಕಥೆಯಂತೆ.

ಸೋಮಶೇಖರ ಶೆಟ್ಟಿ ಎಂಬುವವರು ಚಿತ್ರದ ನಿರ್ಮಾಪಕರು. ಹೊನ್ನವಳ್ಳಿ ಕೃಷ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ವಿಷ್ಣುತೇಜ, ಪ್ರಶಾಂತ್, ಭಾನು ಪ್ರಿಯಾ ಶೆಟ್ಟಿ, ಮೇಘಶ್ರೀ ಮೊದಲಾದವರು ನಟಿಸಿದ್ದಾರೆ. 

#

I Love You Movie Gallery

Rightbanner02_butterfly_inside

Yaana Movie Gallery