ಮೊನ್ನೆ ಮೊನ್ನೆ ಒಂದು ಸುದ್ದಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿಗೆ ಗಾಯವಾಗಿದೆ. ಮೂಳೆ ಫ್ರಾಕ್ಚರ್ ಆಗಿದೆ. ಹೀಗಾಗಿ ಚಿತ್ರತಂಡದಿಂದ ಶ್ರೀನಿಧಿ ಹೊರಬಿದ್ದಿದ್ದಾರೆ ಅನ್ನೋ ಸುದ್ದಿಯದು. ಮೊದಲ ಚಿತ್ರದಲ್ಲಿಯೇ ದೇಶಾದ್ಯಂತ ಸದ್ದು ಮಾಡಿದ ಚಿತ್ರದ ನಾಯಕಿ ಹೀಗೆ ಸೈಡಿಗೆ ಹೋಗಿಬಿಟ್ಟರಾ ಎಂಬ ಪ್ರಶ್ನೆಗಳಿಗೆಲ್ಲ ಈಗ ಅವರೇ ಉತ್ತರ ಕೊಟ್ಟಿದ್ದಾರೆ.
ಬ್ಯಾಡ್ಮಿಂಟನ್ ಆಡುವಾಗ ಬಲಗೈ ರಿಸ್ಟ್‍ನಲ್ಲಿ ಲಿಗಮೆಂಟ್ ಇಂಜುರಿ ಆಗಿದೆ. ಸದ್ಯಕ್ಕೆ ರೆಸ್ಟ್‍ನಲ್ಲಿದ್ದೇನೆ. ನೋ ಪ್ರಾಬ್ಲಂ. ಎರಡು ವಾರದಲ್ಲಿ ಕಂಪ್ಲೀಟ್ ಸರಿ ಹೋಗುತ್ತೇನೆ ಎಂದಿದ್ದಾರೆ ಶ್ರೀನಿಧಿ.
ಕೆಜಿಎಫ್ ಚಾಪ್ಟರ್ 2 ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಶ್ರೀನಿಧಿ ಡೇಟ್ಸ್ ಇನ್ನೂ ಫಿಕ್ಸ್ ಆಗಿಲ್ಲ. ಸೀಕ್ವೆಲ್‍ನಲ್ಲಿ ಶ್ರೀನಿಧಿ ರೋಲ್ ಹೆಚ್ಚಾಗಿದ್ದು, ಲವ್, ರೊಮ್ಯಾನ್ಸ್ ಎಲ್ಲವೂ ಇದೆಯಂತೆ. ಕೆಜಿಎಫ್ ಚಾಪ್ಟರ್-2 ಮುಗಿಯುವವರೆಗೆ ಬೇರೆ ಸಿನಿಮಾ ಇಲ್ಲ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ.