` ಶಂಕರ್‍ನಾಗ್ ಥಿಯೇಟರ್ ಟೆಕ್ನಾಲಜಿ ಸೂಪರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shankar nag theater gets techno makeover
Shankar Nag

ಮುಚ್ಚಿಯೇ ಹೋಗುತ್ತಿದ್ದ ಶಂಕರ್‍ನಾಗ್ ಥಿಯೇಟರ್‍ಗೆ ಮರುಜೀವ ಬಂದಿದೆ. ಅದೂ ಅಂತಿಂತ ಮರುಜೀವವಲ್ಲ, ಬರೋಬ್ಬರಿ ಹೊಸ ಟೆಕ್ನಾಲಜಿ. ಎಷ್ಟರಮಟ್ಟಿಗೆ ಎಂದರೆ, ಈ ಥಿಯೇಟರ್‍ಗೆ ಸ್ಕ್ರೀನ್ ಬೇಕಿಲ್ಲ. ಪರದೆಯಿರೋ ಜಾಗದಲ್ಲೀಗ 14 ಮೀಟರ್ ಅಗಲದ ಎಲ್‍ಇಡಿ ಸ್ಕ್ರೀನ್. ಪ್ರೊಜೆಕ್ಟರ್ ಅಗತ್ಯವಿಲ್ಲದೆ ಸಿನಿಮಾ ನೋಡಬಹುದಾದ ಟೆಕ್ನಾಲಜಿ ಶಂಕರ್‍ನಾಗ್ ಥಿಯೇಟರ್‍ನದ್ದು.

ಇನ್ನು ಸೌಂಡಿಂಗ್ ಟೆಕ್ನಾಲಜಿಯೂ ಡಿಫರೆಂಟ್. ಪ್ರತಿಯೊಬ್ಬ ಪ್ರೇಕ್ಷಕನಿಗೂ ಪ್ರತ್ಯೇಕವಾಗಿಯೇ ಸಿನಿಮಾದ ಆಡಿಯೋ ಕೇಳುತ್ತದೆ. ಹರ್ಮನ್ ಸಂಸ್ಥೆ ಈ ವ್ಯವಸ್ಥೆ ಮಾಡಿಕೊಟ್ಟಿದೆ. 

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಈಗ ಹರ್ಮನ್ ಸಂಸ್ಥೆಯ ರಾಯಭಾರಿಯೂ ಹೌದು. ಹರ್ಮನ್ ಸಂಸ್ಥೆ ಹಾಗೂ ಸ್ವಾಗತ್ ಗ್ರೂಪ್ಸ್‍ನ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥರು ಶಂಕರ್‍ನಾಗ್ ಥಿಯೇಟರ್‍ನ್ನು ಅನಾವರಣ ಮಾಡಿದ್ದಾರೆ. ಒಟ್ಟಿನಲ್ಲಿ ಶಂಕರ್‍ನಾಗ್ ಥಿಯೇಟರ್ ಈಗ ಅದ್ಭುತವೋ ಅದ್ಭುತ.

Gara Gallery

Rightbanner02_butterfly_inside

Paddehuli Movie Gallery