` ಡಾ. ರಾಜ್ ಏಕೆ ಗ್ರೇಟ್..? ಕರ್ನಾಟಕ ರತ್ನ ಪ್ರಶಸ್ತಿಯ ಈ ಕಥೆ ಓದಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dr rajkumar and karnataka ratna story
Dr Rajkumar

ಭಾರತದಲ್ಲಿ ಹೇಗೆ ಭಾರತರತ್ನ ಅತ್ಯುನ್ನತ ಪ್ರಶಸ್ತಿಯೋ, ಹಾಗೆಯೇ ಕರ್ನಾಟಕದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ. ಆ ಪ್ರಶಸ್ತಿಯನ್ನು ಆರಂಭಿಸಿದವರು ಎಸ್.ಬಂಗಾರಪ್ಪ. ಆ ಪ್ರಶಸ್ತಿಯನ್ನು ಪಡೆದ ಮೊದಲಿಗರು ಇಬ್ಬರು, ಕುವೆಂಪು ಹಾಗೂ ಡಾ.ರಾಜ್.

ವಿಧಿಯಾಟ ನೋಡಿ, ಆ ಪ್ರಶಸ್ತಿಯನ್ನು ನೀಡುವ ದಿನ, ಕುವೆಂಪು ಅನಾರೋಗ್ಯಕ್ಕೊಳಗಾಗಿದ್ದರು. ಹಾಸಿಗೆ ಹಿಡಿದಿದ್ದರು. ವೇದಿಕೆಯ ಮೇಲೆ ಆ ಪ್ರಶಸ್ತಿ ಸ್ವೀಕರಿಸಿದ್ದು ಡಾ.ರಾಜ್ ಮಾತ್ರ. ಆದರೆ, ಅದಕ್ಕೂ ಮುನ್ನ ಡಾ.ರಾಜ್ ಹಠ ಹಿಡಿದಿದ್ದರಂತೆ.

ಕುವೆಂಪು ಅವರ ಮುಂದೆ ನಾನೆಷ್ಟರವನು..? ಮೊದಲು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಬೇಕು. ಪುರಸ್ಕಾರ ಪಡೆಯಲು ನನ್ನದೇನೂ ತಕರಾರಿಲ್ಲ. ಆದರೆ, ಪುಟ್ಟಪ್ಪನವರಿಗಿಂತ ಮೊದಲು ನನಗೆ ಕೊಡುವುದು ಬೇಡ. ಅವರು ಅಕ್ಷರ ಸರಸ್ವತಿ ಎಂದು ಹಠ ಹಿಡಿದುಬಿಟ್ಟರು ಡಾ.ರಾಜ್.

ಕೊನೆಗೆ ಮೈಸೂರಿನಲ್ಲಿ ಕುವೆಂಪು ಅವರಿಗೆ, ಅವರ ಮನೆಯಲ್ಲಿಯೇ ಕರ್ನಾಟಕ ರತ್ನ ಪ್ರದಾನ ಮಾಡಲಾಯಿತು. ಅನಂತರ ಬೆಂಗಳೂರಿನಲ್ಲಿ ಡಾ.ರಾಜ್ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯ್ತು. 

ಅಂದಹಾಗೆ, ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಡಾ.ರಾಜ್ ಮೊದಲು ಸಂಬೋಧಿಸಿದ್ದು ಅಲ್ಲಿಯೇ..

Gara Gallery

Rightbanner02_butterfly_inside

Paddehuli Movie Gallery