` ಜೀವನ ಚೈತ್ರ ಶುರುವಾಗಿದ್ದೇ ಅಭಿಮಾನಿ ದೇವರುಗಳ ಹೋರಾಟದಿಂದ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jeevana chaitra was made on fans insistence
Jeevana Chaitra

ಇಂದು ಏಪ್ರಿಲ್ 24. ಡಾ.ರಾಜ್ ಜನುಮದಿನ. ಬದುಕಿದ್ದರೆ, ಅವರಿಗೆ ಸರಿಯಾಗಿ 90 ವರ್ಷವಾಗಿರುತ್ತಿತ್ತು. ಜೀವನದುದ್ದಕ್ಕೂ ಮೌಲ್ಯಗಳನ್ನೇ ನಂಬಿ ಬದುಕಿದ, ಮಗುವಿನಂತೆಯೇ ಇದ್ದು ಹೋದ ಅಪರೂಪದ ಕಲಾವಿದನ ಅದ್ಭುತ ಚಿತ್ರಗಳಲ್ಲೊಂದು ಜೀವನ ಚೈತ್ರ. ಅದು ರಾಜ್ಯದಲ್ಲಿ ಮದ್ಯಪಾನದ ವಿರುದ್ಧ, ಮದ್ಯದಂಗಡಿಗಳ ವಿರುದ್ಧ ಮಹಿಳೆಯರು ಹೋರಾಡುವಂತೆ ಪ್ರೇರೇಪಿಸಿದ ಚಿತ್ರ. ಹೀಗೆ ಹೋರಾಟಕ್ಕೆ ದಾರಿ ದೀಪವಾದ ಆ ಚಿತ್ರ ಶುರುವಾಗಿದ್ದರ ಹಿಂದೆಯೂ ಒಂದು ಹೋರಾಟದ ಕಥೆ ಇದೆ. ಅಭಿಮಾನಿ ದೇವರುಗಳಿಲ್ಲದೆ ಇದ್ದರೆ, ಜೀವನ ಚೈತ್ರ ನನಸಾಗುತ್ತಲೇ ಇರಲಿಲ್ಲ.

ಪರಶುರಾಮ್ ಚಿತ್ರದ ನಂತರ ಡಾ.ರಾಜ್ ಸುಮಾರು 3 ವರ್ಷ ಸೈಲೆಂಟ್ ಆಗಿದ್ದರು. ಯಾವುದೇ ಕಥೆ ಕೇಳಿದರೂ ಒಪ್ಪುತ್ತಿರಲಿಲ್ಲ. ಅಭಿಮಾನಿಗಳೂ ನೋಡಿದರು.. ನೋಡಿದರೂ.. ಕಾದರು.. ಡಾ.ರಾಜ್ ಹೊಸ ಸಿನಿಮಾದ ಸುಳಿವೇ ಇಲ್ಲ. ಆಗ ಶುರುವಾಯ್ತು ನೋಡಿ ಹೋರಾಟ.

ಡಾ.ರಾಜ್ ಮನೆ ಮುಂದೆ ಅಭಿಮಾನಿ ದೇವರುಗಳು ಪ್ರತ್ಯಕ್ಷರಾಗುತ್ತಿದ್ದರು. ನಾಡಿನ ಹಲವು ರಾಜ್ ಅಭಿಮಾನಿ ಸಂಘಗಳ ಸದಸ್ಯರು ರಾಜ್ ಮನೆಯೆದರು ಸಿನಿಮಾ ಮಾಡುವಂತೆ ಧರಣಿ ಕೂರಲು ಶುರು ಮಾಡಿದರು. ಅಷ್ಟೆಲ್ಲ ಯಾಕೆ, ಒಮ್ಮೆ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಹೋಗಿದ್ದ ಚಿ.ಉದಯಶಂಕರ್, ರಾಜ್ ಅಭಿಮಾನಿಗಳ ಸಿಟ್ಟಿಗೆ ಗುರಿಯಾಗಬೇಕಾಯ್ತು. ಜೊತೆಗಿದ್ದ ಪಾರ್ವತಮ್ಮನವರಿಗೂ ಇದು ಅರ್ಥವಾಗಿ ಇನ್ನಷ್ಟು ಸೀರಿಯಸ್ ಆಗಿ ಕಥೆ ಹುಡುಕೋಕೆ ಶುರು ಮಾಡಿದರು. ಆಗ ಕಣ್ಣಿಗೆ ಬಿದ್ದಿದ್ದೇ ವಿಶಾಲಾಕ್ಷಿ ದಕ್ಷಿಣಾ ಮೂರ್ತಿಯವರ ವ್ಯಾಪ್ತಿ ಪ್ರಾಪ್ತಿ ಕಾದಂಬರಿ.

ವಿಚಿತ್ರವೆಂದರೆ, ಆ ಕಾದಂಬರಿಯ ಹಕ್ಕನ್ನು ಕೆ.ವಿ.ಜಯರಾಂ ತೆಗೆದುಕೊಂಡಿದ್ದರಂತೆ. ರಾಜ್ ಮಾಡುತ್ತಾರೆ ಎಂಬ ಕಾರಣಕ್ಕೆ ಕಾದಂಬರಿಯ ಹಕ್ಕನ್ನು ಉಡುಗೊರೆಯಾಗಿ ನೀಡಿದರು ಕೆ.ವಿ.ಜಯರಾಂ. ಮುಂದಿನದ್ದು ಈಗ ಇತಿಹಾಸ.

ಅಂದಹಾಗೆ, ಕಲಾವಿದನೊಬ್ಬ ಸಿನಿಮಾ ಮಾಡಲೇಬೇಕು ಎಂದು ಅಭಿಮಾನಿಗಳೇ ಪ್ರತಿಭಟನೆ ನಡೆಸಿ ಗೆದ್ದ ಉದಾಹರಣೆ ಇರುವುದೂ ಕೂಡಾ ಡಾ.ರಾಜ್ ಒಬ್ಬರಲ್ಲಿ ಮಾತ್ರವೇ. 

#

I Love You Movie Gallery

Rightbanner02_butterfly_inside

Yaana Movie Gallery