` ಅಣ್ಣಾವ್ರ ಸಿನಿಮಾಗಳೂ.. ಜೀವನ ಪಾಠಗಳೂ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raj movies had lessong for life
Dr Rajkumar

ಡಾ.ರಾಜ್ ಕುಮಾರ್, ಕೇವಲ ಕನ್ನಡ ಕಂಠೀರವನಷ್ಟೇ ಅಲ್ಲ, ಅವರೊಂದು ಜೀವನ ಪಾಠ. ರಾಜ್ ಅವರ ಹಲವು ಚಿತ್ರಗಳು ಹಲವರಿಗೆ ಸ್ಫೂರ್ತಿ ತುಂಬಿವೆ. ಬದುಕನ್ನೇ ಬದಲಾಯಿಸಿವೆ. ಹಾಗೆ ಬದುಕು ಕಟ್ಟಿಕೊಂಡವರ ನೂರಾರು ಉದಾಹರಣೆಗಳು ಇವು ಕನಸೋ.. ನನಸೋ ಎಂಬ ಪ್ರಶ್ನೆ ಮೂಡಿಸುವುದು ಸುಳ್ಳಲ್ಲ. 

ಜೀವನ ಚೈತ್ರ : ಇದು ಕೌಟುಂಬಿಕ ಸಿನಿಮಾ ಆದರೂ, ಚಿತ್ರದ ಕೊನೆಯಲ್ಲಿ ಮದ್ಯದಂಗಡಿಗಳನ್ನು ಧ್ವಂಸ ಮಾಡುವ ದೃಶ್ಯವಿದೆ. ಊರು ನೆಮ್ಮದಿಯಾಗಿರಬೇಕು ಎಂದರೆ, ಮದ್ಯದಂಗಡಿ ಇರಬಾರದು ಎನ್ನುತ್ತಾನೆ ನಾಯಕ. ಆ ಸಿನಿಮಾ ಬಂದ ಮೇಲೆ ಉ.ಕರ್ನಾಟಕದ ಹಲವು ಹಳ್ಳಿಗಳಲ್ಲಿ ಡಾ.ರಾಜ್ ಫೋಟೋ ಹಿಡಿದುಕೊಂಡು ಹೆಣ್ಣು ಮಕ್ಕಳೇ ಬೀದಿಗಿಳಿದು ಸಾರಾಯಿ ಅಂಗಡಿ ಮುಚ್ಚಿಸಿದ್ದರು.

ಬಂಗಾರದ ಮನುಷ್ಯ : ಈ ಸಿನಿಮಾ ನೋಡಿ, ಪಟ್ಟಣ ಬಿಟ್ಟು ಹಳ್ಳಿಗೆ ಹೋಗಿ ಮಾದರಿ ಕೃಷಿಕರಾದವರ ಸಂಖ್ಯೆ ಒಂದಲ್ಲ... ಎರಡಲ್ಲ.. ನೂರಾರು.

ಹಾಲು ಜೇನು : ತುಮಕೂರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ದಂಪತಿಗೆ ಡೈವೋರ್ಸ್ ಸಿಕ್ಕಿತು. ವಿಚಿತ್ರವೆಂದರೆ, ಆರ್ಡರನ್ನು ಬರೆಯಲು ಪೇಪರ್ ಇರಲಿಲ್ಲ. ಹೀಗಾಗಿ ನ್ಯಾಯಾಧೀಶರು ಸಂಜೆ ಬರಲು ಹೇಳಿ ದಂಪತಿಯನ್ನು ಕಳಿಸಿಕೊಟ್ಟರು. ಹೊರಬಂದ ದಂಪತಿ, ಹೇಗಿದ್ದರೂ ಬೇರೆಯಾಗುತ್ತೇವೆ. ಕೊನೆಯದಾಗಿ ಸಿನಿಮಾ ನೋಡೋಣ ಎಂದು ಟಾಕೀಸ್‍ಗೆ ಹೋದರು. ನೋಡಿದ್ದು ಹಾಲು ಜೇನು ಸಿನಿಮಾ. ಕ್ಯಾನ್ಸರ್‍ನಿಂದ ನರಳುವ ಪತ್ನಿಯನ್ನು ಉಳಿಸಿಕೊಳ್ಳಲು ಹೊಡೆದಾಡುವ ಪತಿಯಾಗಿದ್ದರು ರಾಜ್. ಹೊರಬಂದ ದಂಪತಿ, ನಮಗೆ ವಿಚ್ಛೇದನ ಬೇಡ ಎಂದು ನ್ಯಾಯಾಧೀಶರಲ್ಲಿ ಹೋಗಿ ಮನವಿ ಮಾಡಿಕೊಂಡಿದ್ದರಂತೆ.

ಒಡಹುಟ್ಟಿದವರು : ಡಾ.ರಾಜ್ ಮತ್ತು ಅಂಬರೀಷ್ ಒಟ್ಟಿಗೇ ಅಭಿನಯಿಸಿದ್ದ ಏಕೈಕ ಸಿನಿಮಾ ಅದು. ಆ ಸಿನಿಮಾ, ಅದೆಷ್ಟೋ ಅಣ್ಣತಮ್ಮಂದಿರು ಒಟ್ಟಿಗೇ ಬಾಳುವಂತಾಯ್ತು. ಹಲವು ಕೋರ್ಟುಗಳಲ್ಲಿ ಅಣ್ಣ-ತಮ್ಮಂದಿರು ಆಸ್ತಿ ಹಂಚಿಕೆ ವ್ಯಾಜ್ಯಗಳನ್ನು ವಾಪಸ್ ತೆಗೆದುಕೊಂಡಿದ್ದರು.

ಆಕಸ್ಮಿಕ : ಈ ಸಿನಿಮಾದಲ್ಲಿ ಹೆಂಗಸರನ್ನು ಅವಾಚ್ಯ ಶಬ್ಧಗಳಿಂದ ಬಯ್ಯುವವರನ್ನು ರಾಜ್ ಹಿಗ್ಗಾಮುಗ್ಗಾ ಜಾಡಿಸುತ್ತಾರೆ. ಆ ಸಿನಿಮಾ ನೋಡಿದ ಅಭಿಮಾನಿಗಳು ಇನ್ನು ಮುಂದೆ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಬಯ್ಯುವುದಿಲ್ಲ ಎಂಬು ಪ್ರತಿಜ್ಞೆ ಸ್ವೀಕರಿಸಿದ್ದರು.

ಹೇಳುತ್ತಾ ಹೋದರೆ, ಇಂತಹ ಕಥೆಗಳು ನೂರಾರಿವೆ. ಒಬ್ಬೊಬ್ಬ ಅಭಿಮಾನಿಯ ಮನಸ್ಸಿನಲ್ಲೂ ಒಂದೊಂದು ರೀತಿ ಪ್ರಭಾವ ಬೀರಿದ್ದಾರೆ ಡಾ.ರಾಜ್ ಅಂದಹಾಗೆ ನೆನಪಿರಲಿ ಪ್ರೇಮ್ ಇದ್ದಾರಲ್ಲ. ಅವರೊಳಗೊಬ್ಬ ಜವಾಬ್ದಾರಿಯುತ ವ್ಯಕ್ತಿ ಹುಟ್ಟಿದ್ದೇ ಡಾ.ರಾಜ್‍ರ ಬಂಗಾರದ ಮನುಷ್ಯ ಚಿತ್ರದಿಂದ. ಅದು ಅವರೇ ಹೇಳಿಕೊಂಡಿರುವ ಸತ್ಯ.

#

I Love You Movie Gallery

Rightbanner02_butterfly_inside

Yaana Movie Gallery