ಕಳೆದ ವರ್ಷ ಬಿಡುಗಡೆಯಾಗಿದ್ದ ಸಿನಿಮಾ ಒಂದಲ್ಲಾ.. ಎರಡಲ್ಲಾ.. ಸಿನಿಮಾ ಎಷ್ಟು ಅದ್ಭುತವಾಗಿತ್ತೆಂದರೆ, ಚಿತ್ರವನ್ನು ನೋಡಿದ ಕ್ಲಾಸ್ ವರ್ಗದ ಪ್ರೇಕ್ಷಕರು ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದರು. ರಾಮಾ ರಾಮಾ ರೇ ಚಿತ್ರದ ನಂತರ ಸತ್ಯಪ್ರಕಾಶ್ ನಿರ್ದೇಶಿಸಿದ್ದ ಸಿನಿಮಾ, ಒಂದು ವರ್ಗದ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಸಮೀರ ಎಂಬ ಪುಟ್ಟ ಹುಡುಗ, ಒಂದು ಹಸುವಿನ ಮೂಲಕ ಭಾವೈಕ್ಯತೆಯ ಕಥೆ ಹೇಳಿದ್ದ ಸತ್ಯಪ್ರಕಾಶ್‍ಗೆ, ಈಗ ಬಾಲಿವುಡ್‍ನ ಪ್ರಖ್ಯಾತ ವಿಮರ್ಶಕರ ಮೆಚ್ಚುಗೆಯ ಪ್ರಶಸ್ತಿ ಸಿಕ್ಕಿದೆ.
2019ನೇ ಸಾಲಿನ ಕ್ರಿಟಿಕ್ಸ್ ಚಾಯ್ಸ್ ಫಿಲಂ ಅವಾಡ್ರ್ಸ್ ಪ್ರಶಸ್ತಿ ಗೆದ್ದಿದೆ ಒಂದಲ್ಲಾ ಎರಡಲ್ಲಾ ಸಿನಿಮಾ. ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ಸತ್ಯಪ್ರಕಾಶ್ ಮುಂಬೈನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲ, ಫಿಲಂ ಅವಾಡ್ರ್ಸ್ ವೇಳೆ ಚಿತ್ರ ವೀಕ್ಷಿಸಿದ ತೆಲುಗು, ತಮಿಳು, ಮರಾಠಿ ಚಿತ್ರ ನಿರ್ಮಾಪಕರಿಂದ ಚಿತ್ರದ ರೀಮೇಕ್‍ಗೆ ಭಾರಿ ಡಿಮ್ಯಾಂಡ್ ಬಂದಿದೆಯಂತೆ.