ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊಟ್ಟೆ ಸ್ಟಾರ್ ಎಂದೇ ಜನಪ್ರಿಯರಾದ ರಾಜ್ ಬಿ ಶೆಟ್ಟಿ, ಆನಂತರ ನಟನೆಯಲ್ಲೇ ಹೆಚ್ಚು ತೊಡಗಿಸಿಕೊಂಡವರು. ಮಾಯಾ ಬಜಾರ್, ಅಮ್ಮು, ಮಹಿರಾ, ಅಮ್ಮಚ್ಚಿಯೆಂಬ ನೆನಪು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಚಿತ್ರಗಳಲ್ಲಿ ನಟಿಸುತ್ತಾ ಆಕ್ಟಿಂಗ್‍ನಲ್ಲೇ ಬ್ಯುಸಿಯಾಗಿಬಿಟ್ಟರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.
ಒಂದು ಮೊಟ್ಟೆಯ ಕಥೆಯಲ್ಲಿ ನಟಿಸಿ, ನಿರ್ದೇಶಿಸಿ ಗೆದ್ದಿದ್ದ ರಾಜ್ ಬಿ ಶೆಟ್ಟಿ, ಈ ಬಾರಿ ಹರಹರ ಎಂಬ ಮಾಸ್ ಟೈಟಲ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಒಂದು ಪಾತ್ರದಲ್ಲಿಯೂ ನಟಿಸುತ್ತಿರುವ ರಾಜ್, ಇನ್ನೊಂದು ಪ್ರಮುಖ ಪಾತ್ರಕ್ಕೆ ಮತ್ತೊಬ್ಬ ಸ್ಟಾರ್ ನಟನ ಹುಡುಕಾಟದಲ್ಲಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆಯಂತೆ.