ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ. ಈ ಮ್ಯೂಸಿಕಲ್ ಸಿನಿಮಾದಲ್ಲಿ 10 ಹಾಡುಗಳಿವೆ. ವಿಶೇಷವೇನು ಗೊತ್ತೇ.. ಒಂದೇ ಒಂದು ಹಾಡಿನಲ್ಲೂ ರವಿಚಂದ್ರನ್ ಇಲ್ಲ. ಹೀರೋಗೆ ಅಪ್ಪನಾಗಿ ನಟಿಸಿರುವ ರವಿಚಂದ್ರನ್ಗೆ ಅದೊಂದು ಬೇಜಾರಿದೆ.. ಅದನ್ನು ಅವರು ತಮಾಷೆಯಾಗಿ ಹೇಳಿಕೊಳ್ಳೋದು ಹೀಗೆ..
ಇಡೀ ಸಿನಿಮಾ ನಿಂತಿರುವುದು ಹೀರೋ ಮೇಲೆ. ನಿರ್ದೇಶಕ ಗುರು ದೇಶಪಾಂಡೆ, ಈ ಪಾತ್ರಕ್ಕೆ ನಾನೇ ಬೇಕು ಎಂದು ಹಠ ಮಾಡಿ ಕರೆಸಿಕೊಂಡರು. ಇಡೀ ಸಿನಿಮಾದಲ್ಲಿ 10 ಹಾಡುಗಳಿದ್ದರೂ, ನನಗಾಗಿ ಒಂದು ಹಾಡನ್ನೂ ಇಟ್ಟಿಲ್ಲ. ಹೆಸರಿಗೆ ಸುಧಾರಾಣಿ ಇದ್ದಾರೆ, ಜೋಡಿಯಾಗಿ. ಅವರನ್ನು ಮುಟ್ಟೋದು ದೂರದ ಮಾತು, ಶಾಸ್ತ್ರಕ್ಕಾದರೂ ಒಂದು ಸೀನ್ ಜೊತೆಗಿಡೋದು ಬೇಡವಾ ಎನ್ನುತ್ತಾರೆ ರವಿಚಂದ್ರನ್.
ಮನೆದೇವ್ರು ನಂತರ ಇಬ್ಬರೂ ಒಟ್ಟಿಗೇ ನಟಿಸಿರುವ ಚಿತ್ರದಲ್ಲಿ ಶ್ರೇಯಸ್ಗೆ ನಿಶ್ವಿಕಾ ನಾಯ್ಡು ಹೀರೋಯಿನ್.
ನಾನು ಹೀರೋ ಆಗಿ ಗಳಿಸಿದ್ದಕ್ಕಿಂತ, ಪೋಷಕ ನಟನಾಗಿಯೇ ಹೆಚ್ಚು ಗಳಿಸಿದ್ದೇನೆ ಎನ್ನುವ ರವಿಚಂದ್ರನ್, ಶ್ರೇಯಸ್ ಚಿತ್ರಕ್ಕೆ ಶುಭ ಕೋರಿದ್ದಾರೆ.