ಅದು 2009. ಏಪ್ರಿಲ್ 10ನೇ ತಾರೀಕು. ಕನ್ನಡ ಚಿತ್ರರಂಗದಲ್ಲೊಂದು ಸಿನಿಮಾ ಮೋಡಿಯನ್ನೇ ಮಾಡಿತ್ತು. ನಿರ್ದೇಶಕ ಶಿವಮಣಿ, ಅದೇ ಮೊದಲ ಬಾರಿಗೆ ಹೊಸಬರನ್ನು ಹಾಕಿಕೊಂಡು ಒಂದು ಯೂತ್ಫುಲ್ ಲವ್ ಸ್ಟೋರಿ ಕೊಟ್ಟಿದ್ದರು. ಆ ಚಿತ್ರದ ಹೆಸರು ಜೋಶ್. ರಾಕೇಶ್ ಅಡಿಗ ಎಂಬ ಚೆಲುವ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಹಾಗೆ..
ಈಗ 2019. ಏಪ್ರಿಲ್ 12. ರಾಕೇಶ್ ಅಡಿಗ ನಿರ್ದೇಶಕರಾಗಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ರಾಕೇಶ್, ಈಗ ನೈಟ್ ಔಟ್ ಸಿನಿಮಾ ನಿರ್ದೇಶಿಸಿದ್ದಾರೆ.
ಸರಿಯಾಗಿ 10 ವರ್ಷಗಳ ಹಿಂದೆ ಹೀರೋ ಆಗಿ ಎಂಟ್ರಿ ಕೊಟ್ಟಾಗ ಏಪ್ರಿಲ್ ತಿಂಗಳು ಅದೃಷ್ಟ ಹೊತ್ತು ತಂದಿತ್ತು. ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ. ಅದೇ ಏಪ್ರಿಲ್ ತಿಂಗಳು. ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ರಾಕೇಶ್ ಅಡಿಗ.
ಭರತ್, ಶೃತಿ ಗೊರಾಡಿಯಾ, ಅಕ್ಷಯ್ ನಟಿಸಿರುವ ಚಿತ್ರಕ್ಕೆ, ಸಮೀರ್ ಕುಲಕರ್ಣಿ ವಿಭಿನ್ನ ಸಂಗೀತ ಸಂಯೋಜಿಸಿದ್ದಾರೆ. ಆರ್ಯನ್ ಮೋಷನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಬರುತ್ತಿರುವ ಸಿನಿಮಾ ಇದು. ಲಕ್ಷ್ಮಿ ನವೀನ್ ಮತ್ತು ನವೀನ್ ಕೃಷ್ಣ ನಿರ್ಮಾಪಕರು.