ಬೆಲ್‍ಬಾಟಂ ಸಿನಿಮಾ 50 ದಿನ ಪೂರೈಸಿ ಶತದಿನೋತ್ಸವದತ್ತ ಮುನ್ನುಗ್ಗುತ್ತಿರುವಾಗಲೇ ಚಿತ್ರತಂಡ 50ನೇ ದಿನದ ಸೆಲಬ್ರೇಷನ್ ಮಾಡಿದೆ. ಚಿತ್ರದ ಪಾತ್ರಧಾರಿಗಳಾದ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾಗೆ ಖುಷಿ ಕೊಟ್ಟಿರುವುದು ಚಿತ್ರ ನೋಡಿದವರೆಲ್ಲ ಅವರನ್ನು ಕಳ್‍ಭಟ್ಟಿ ಕುಸುಮ, ಡಿಟೆಕ್ಟಿವ್ ದಿವಾಕರ ಎಂಬ ಪಾತ್ರದ ಮೂಲಕವೇ ಗುರುತಿಸುತ್ತಿರುವುದು.
ಆ ಖುಷಿಯನ್ನು ಹಂಚಿಕೊಳ್ಳುತ್ತಲೇ ಹರಿಪ್ರಿಯಾ, ಏತಕೆ.. ಹಾಡಿನ ಶೂಟಿಂಗ್ ವೇಳೆ ರಿಷಬ್ ಶೆಟ್ಟಿ ಡ್ಯಾನ್ಸ್ ಪ್ರಾಕ್ಟೀಸ್ ನೋಡಿ ಮಜಾ ತೆಗೆದುಕೊಂಡಿದ್ದನ್ನು ಹೇಳಿ ಖುಷಿ ಪಟ್ಟರು. ನಾನು ಅನಂತ್‍ನಾಗ್ ಅಭಿಮಾನಿ. ಡ್ಯಾನ್ಸ್ ಬರಲ್ಲ, ಅದಕ್ಕೇ ನಿರ್ದೇಶಕರಿಗೆ ಹೇಳ್ತೇನೆ, ಹೀರೋಯಿನ್ ಡ್ಯಾನ್ಸ್ ಮಾಡುವಾಗ ನಾನು ಬೇಕಾದರೆ ಪಂಚೆಯುಟ್ಟುಕೊಂಡು ಓಡಾಡಿಕೊಂಡಿರುತ್ತೇನೆ ಎಂದು ಹೇಳಿ ನಕ್ಕಿದ್ದಾರೆ.