ಕವಲುದಾರಿ ಚಿತ್ರದಲ್ಲಿರೋ ಕಥೆ ಏನು..? ಪಿಆರ್ಕೆ ಬ್ಯಾನರ್ನ ಮೊದಲ ಸಿನಿಮಾ ಎಂಬ ಕಾರಣಕ್ಕೆ ಕುತೂಹಲ ಸೃಷ್ಟಿಸಿರುವ ಚಿತ್ರದಲ್ಲಿ ನಿರೀಕ್ಷೆ ಹುಟ್ಟಿಸಿರುವುದು ಅದೊಂದೇ ಅಲ್ಲ. ನಿರ್ದೇಶಕ ಹೇಮಂತ್ ರಾವ್, ಅನಂತ್ ನಾಗ್ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಅಜನೀಶ್ ಸಂಗೀತ ಅದ್ಭುತವಾಗಿ ಕೇಳಿಸುತ್ತಿದೆ. ರಿಷಿ, ಡಿಫರೆಂಟಾಗಿ ಕಾಣಿಸುತ್ತಿದ್ದರೆ, ಸುಮನ್ ರಂಗನಾಥ್ ಮತ್ತಷ್ಟು ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಎಂಬುದೇ ಕುತೂಹಲ.
ಅನಂತ್ ನಾಗ್ ಪಾತ್ರದ ಹೆಸರು ಮುತ್ತಣ್ಣ. ಅದು ಜಮ್ಮುಕಾಶ್ಮೀರದಲ್ಲಿ ಹುತಾತ್ಮರಾದ ಯೋಧನೊಬ್ಬನ ಹೆಸರು. ಚಿತ್ರದಲ್ಲಿ ಅನಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ. ಅವರ ಬಳಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿ ರಿಷಿ, ತಮ್ಮ ಮುಂದೆ ಇರುವ ಕೇಸ್ಗಳ ಅನುಮಾನ ಬಗೆಹರಿಸಿಕೊಳ್ಳೋಕೆ ಬರುತ್ತಾರೆ. ರಿಷಿ, ಕ್ಲೂಗಳನ್ನು ಹುಡುಕಿ ತೆಗೆಯುವುದರಲ್ಲಿ ಎಕ್ಸ್ಪರ್ಟ್.
ಹೀಗೆ ಸಾಗುತ್ತಾ ಹೋಗುವ ಕಥೆಯಲ್ಲಿ ನಿಜಕ್ಕೂ ಹೈಲೈಟ್ ಆಗಿರುವುದು ರಾಜಕೀಯ ಮತ್ತು ಕ್ರೈಂ.
ನಾನು ರಾಜಕೀಯದಲ್ಲೂ ಇದ್ದು ಬಂದವನು. ಹೀಗಾಗಿ ಇದು ನನಗೆ ವಾಸ್ತವಕ್ಕೆ ಹತ್ತಿರ ಎನಿಸಿತು. ಕಥೆ ಇಷ್ಟವಾಯಿತು ಎನ್ನುತ್ತಾರೆ ಅನಂತ್ನಾಗ್.
ರಾಜಕೀಯ ಮತ್ತು ಕ್ರೈಂ ಬೇರೆಬೇರೆಯಾಗಿಯೇನೂ ಉಳಿದಿಲ್ಲ. ಆದರೆ, ನೇರವಾಗಿ ಹೇಳುವುದಕ್ಕೂ ಸಾಧ್ಯವಿಲ್ಲ. ಹೀಗಿರುವಾಗ, ಈ ಚಿತ್ರದಲ್ಲಿ ಅವುಗಳನ್ನು ಹೇಗೆ ಹೇಳಿದ್ದಾರೆ ಎನ್ನುವುದೇ ಕವಲುದಾರಿ ಕುತೂಹಲ.