ಕಳೆದ ತಿಂಗಳು ಅಮ್ಮನ ಮನೆ ಸಿನಿಮಾ ತೆರೆ ಕಂಡಿತ್ತು. ಅದು ರಾಘಣ್ಣ 14 ವರ್ಷಗಳ ಮತ್ತೆ ತೆರೆಗೆ ಬಂದಿದ್ದ ಸಿನಿಮಾ. ನಿಖಿಲ್ ಮಂಜೂ ನಿರ್ದೇಶನದ ಸಿನಿಮಾ, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈಗ ಅದೇ ಜೋಡಿ ಮತ್ತೊಮ್ಮೆ ಒಂದಾಗಿದೆ. ಅಪ್ಪನ ಅಂಗಿಯಲ್ಲಿ.
ತಂದೆಯೊಬ್ಬ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಕುಟುಂಬಕ್ಕಾಗಿ ಮೀಸಲಿಟ್ಟಿರುತ್ತಾನೆ. ಅಪ್ಪನ ಅಂಗಿ ಎಂದರೆ ಬಟ್ಟೆಯಲ್ಲ.. ಅದು ಆತನ ತ್ಯಾಗದ ಕಥೆ ಎಂದಿದ್ದಾರೆ ನಿಖಿಲ್ ಮಂಜು.
ಸುನಿಲ್ ನಿರ್ಮಾಣದ ಚಿತ್ರದಲ್ಲಿ ಬಹುತೇಕ ಅಮ್ಮನ ಮನೆ ಚಿತ್ರತಂಡವೇ ಇರಲಿದೆ. ಏಪ್ರಿಲ್ 24ರಂದು ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ.