ಕೆಲವು ಚಿತ್ರಗಳಲ್ಲಿ ಕಥೆ ಎರಡು ಮೂರು ಜನ್ಮಕ್ಕಾಗುವಷ್ಟಿರುತ್ತವೆ. ಜನ್ಮ ಜನ್ಮಾಂತರದ ಕಥೆಗಳೂ ಇರುತ್ತವೆ. ಇನ್ನು ಕೆಲವು ಕ್ರೈಂ ಥ್ರಿಲ್ಲರ್ಗಳಲ್ಲಿ ಒಂದು ದಿನದ ಕಥೆಗಳೂ ಇರುತ್ತವೆ. ಆದರೆ, ಈ ನೈಟ್ಔಟ್ ಹಾಗಲ್ಲ. ಇಡೀ ಸಿನಿಮಾ ಜಸ್ಟ್ 6 ಗಂಟೆಯ ಕಥೆ.
ಸಿನಿಮಾದ ಓಪನಿಂಗ್ ಸೀನ್ನಲ್ಲಿ ವ್ಯಕ್ತಿಯೊಬ್ಬ ಹುಚ್ಚನಂತೆ ಓಡಾಡುತ್ತಾ ಕಿರುಚಾಡುತ್ತಿರುತ್ತಾನೆ.. ಜಸ್ಟ್ 6 ಗಂಟೆಯ ಹಿಂದೆ ಅವನು ನಾರ್ಮಲ್ ಆಗಿದ್ದ.
ಸ್ವಲ್ಪ ಹಿಂದಕ್ಕೆ ಹೋದರೆ, ಜಸ್ಟ್ 6 ಗಂಟೆಯ ಹಿಂದೆ ಬಾರ್ವೊಂದರಿಂದ ಕಥೆ ಶುರುವಾಗುತ್ತೆ. ಬೆಂಗಳೂರಿನ ಆಚೆಯಲ್ಲಿರೋ ಪುಟ್ಟ ಬಾರ್ನಲ್ಲಿದ್ದ ಆ ಯುವಕ, ನಂತರದ 6 ಗಂಟೆಯಲ್ಲಿ ಹುಚ್ಚನಾಗೋಕೆ ಏನು ಕಾರಣ..? ಹೀಗೆ ಒಂದು ಕುತೂಹಲದ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟು ಕುಳಿತಿದ್ದಾರೆ ರಾಕೇಶ್ ಅಡಿಗ.
ಜೋಶ್ ಖ್ಯಾತಿಯ ನಟ ರಾಕೇಶ್ ಅಡಿಗಗೆ ಇದು ನಿರ್ದೇಶಕನಾಗಿ ಮೊದಲ ಸಿನಿಮಾ. ಕಥೆಯೂ ಅವರದ್ದೇ. ಭರತ್ ಗೌಡ, ಶೃತಿ ಗೊರಾಡಿಯ ನಾಯಕ, ನಾಯಕಿ. ಇದೇ ವಾರ ಥಿಯೇಟರುಗಳಿಗೆ ಲಗ್ಗೆಯಿಡುತ್ತಿದೆ ನೈಟ್ಔಟ್.