ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಮೇ ಹೊತ್ತಿಗೆ ರಿಲೀಸ್ ಆಗಬಹುದು ಎನ್ನಲಾಗಿತ್ತು. ಆದರೆ, ಚಿತ್ರದ ಬಿಡುಗಡೆ ಈಗ ಆಗಸ್ಟ್‍ಗೆ ಮುಂದೆ ಹೋಗಿದೆ. ಕಾರಣ ಸಿಂಪಲ್, ಸಿನಿಮಾವನ್ನು 9 ಭಾಷೆಗಳಲ್ಲಿ ರಿಲೀಸ್ ಮಾಡುತ್ತಿರುವುದು.
6 ಭಾಷೆಗಳಲ್ಲಿ ಚಿತ್ರದ ಡೈಲಾಗ್ ಬರೆಯುವ ಕೆಲಸ ಮುಗಿದಿದೆ. ಹಾಡುಗಳ ಲಿರಿಕ್ಸ್ ಕೂಡಾ ಅನುವಾದವಾಗಿ ಹೋಗಿದೆ. ಈಗ ಲಿಪ್ ಸಿಂಕಿಂಗ್ ಆಗುವಂತೆ ಸಂಭಾಷಣೆ ಬರೆಯುವ ಕೆಲಸ ನಡೆಯುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಪೈಲ್ವಾನ್ ಹೆಸರಲ್ಲೇ ರಿಲೀಸ್ ಆಗಲಿದೆ. ಹಿಂದಿಗೆ ಬೇರೆ ಟೈಟಲ್ ಇಡುವ ಕೆಲಸ ನಡೆಯುತ್ತಿದೆ. ಮರಾಠಿ, ಬೆಂಗಾಲಿ, ಬೋಜ್‍ಪುರಿ ಹಾಗೂ ಪಂಜಾಬಿ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ.
ಆದರೆ, ಹಿಂದಿ ಬಿಡುಗಡೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಹಿಂದಿ ಡಬ್ಬಿಂಗ್ ಸಿನಿಮಾ ವಿತರಕರು, ಮರಾಠಿ, ಬೆಂಗಾಲಿ, ಬೋಜ್‍ಪುರಿ ಹಾಗೂ ಪಂಜಾಬಿ ಭಾಷೆಗಳಲ್ಲಿ ಸಿನಿಮಾ ಬೇಡ ಎನ್ನುತ್ತಿದ್ದಾರಂತೆ. ಹೀಗಾಗಿ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುತ್ತಿದೆ ಚಿತ್ರತಂಡ.