ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ಕಾಫಿ ಕಪ್ಪುಗಳಲ್ಲಿ ಪ್ರಮೋಟ್ ಮಾಡಿದ್ದ ನಿರ್ದೇಶಕ ಹೇಮಂತ್ ರಾವ್, ಕವಲುದಾರಿ ಚಿತ್ರವನ್ನು ಟಿಶ್ಯೂ ಪೇಪರ್‍ಗಳಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಟಿಶ್ಯೂ ಪೇಪರ್‍ಗಳಲ್ಲಿ ಚಿತ್ರದ ವಿವರಗಳನ್ನು ಮುದ್ರಿಸಿ, ಜನರನ್ನು ರೀಚ್ ಆಗಲು ಹೊರಟಿದ್ದಾರೆ.
ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ. ಚಿತ್ರದ ಪ್ರಮೋಷನ್‍ಗೆ ಸ್ವತಃ ಪುನೀತ್ ಇದ್ದಾರೆ. ಅನಂತ್‍ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಷನಿ ಪ್ರಕಾಶ್ ಅಭಿನಯದ ಸಿನಿಮಾ ಕವಲುದಾರಿ.
ಸಿನಿಮಾ ಪ್ರಚಾರಕ್ಕೆ ಈಗ ಪೋಸ್ಟರ್‍ಗಳಿಲ್ಲ, ಬ್ಯಾನರುಗಳೂ ಇಲ್ಲ. ಹೀಗಿರುವಾಗ ಚಿತ್ರದ ಪ್ರಚಾರಕ್ಕೆ ವಿಭಿನ್ನ ಐಡಿಯಾ ಕಂಡುಕೊಳ್ಳುವುದು ಅನಿವಾರ್ಯವೂ ಹೌದು. ಹೇಮಂತ್ ರಾವ್ ವಿಭಿನ್ನ ಹೆಜ್ಜೆಯಿಟ್ಟಿದ್ದಾರೆ.