` ಗುಜರಾತಿ ಚೆಲುವೆಯ ನೈಟ್ ಔಟ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
gujarathi beaty thrilled over night out
Shruthi Goradia

ರಾಕೇಶ್ ಅಡಿಗ ನಟಿಸಿ, ನಿರ್ದೇಶಿಸಿರುವ ಸಿನಿಮಾ ನೈಟ್‍ಔಟ್. ಇದೇ ವಾರ ತೆರೆಗೆ ಬರುತ್ತಿರೋ ಈ ಸಿನಿಮಾದ ವಿಶೇಷವೆಂದರೆ, ಚಿತ್ರದಲ್ಲಿನ ಒಂದು ಆಟೋ. ಆ ಆಟೋ ಕೂಡಾ ಒಂದು ಪಾತ್ರವಂತೆ. ಹೀಗೆ ವಿಶೇಷತೆಯನ್ನೇ ಕಟ್ಟಿಕೊಟ್ಟಿರುವ ಸಿನಿಮಾದ ನಾಯಕಿ ಶೃತಿ. 

ಗುಜರಾತಿ ಮೂಲದ ಈ ಹುಡುಗಿಗೆ ಇದು 2ನೇ ಸಿನಿಮಾ. ಈ ಮೊದಲು ಸಂಕಷ್ಟಕರ ಗಣಪತಿ ಚಿತ್ರದಲ್ಲಿ ನಟಿಸಿದ್ದ ಚೆಲುವೆ.

`ನಾನು ರಿಯಲ್ಲಾಗಿ ಹೇಗಿದ್ದೇನೋ.. ಅದಕ್ಕೆ ತದ್ವಿರುದ್ಧವಾದ ಪಾತ್ರ ಚಿತ್ರದಲ್ಲಿದೆ. ನಾನು ಜೋವಿಯಲ್. ಆದರೆ ಸಿನಿಮಾದಲ್ಲಿ ಸೈಲೆಂಟ್' ಎನ್ನುತ್ತಾರೆ ನಾಯಕಿ ಶೃತಿ.

ನಮ್ಮ ಚಿತ್ರದಲ್ಲಿ ಸ್ಟಾರ್‍ಗಳಿಲ್ಲ. ಆದರೆ, ಅದನ್ನು ಮೀರಿಸುವ ಒಂದೊಳ್ಳೆ ಕಥೆ ಇದೆ ಎನ್ನುವ ವಿಶ್ವಾಸ ರಾಕೇಶ್ ಅಡಿಗ ಅವರದ್ದು.