ಕವಚ ಚಿತ್ರ ರಿಲೀಸ್ಗೆ ರೆಡಿ. ಇದೇ ವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿದ್ದರೆ, ವಸಿಷ್ಠ ವಿಲನ್.
ಚಿತ್ರದಲ್ಲಿ ನಂದೊಂಥರಾ ವಿಚಿತ್ರ ಕ್ಯಾರೆಕ್ಟರ್. ಯಾರೊಂದಿಗೂ ಮಾತನ್ನೇ ಆಡದ ಕ್ರೂರಿ. ಕಣ್ಣುಗಳಲ್ಲಿ ಸದಾ ಆಕ್ರೋಶವನ್ನೇ ಉಗುಳುವ ಪಾತ್ರ. ಹೀಗಾಗಿ ನಾನು ಸೆಟ್ಟಿನಲ್ಲಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಒಬ್ಬನೇ ಇರುತ್ತಿದೆ. ಹಾಗೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆತುಬಿಟ್ಟರೆ, ಈ ಪಾತ್ರದೊಳಗೆ ಪ್ರವೇಶ ಸಾಧ್ಯವಾಗದು ಎಂದುಕೊಂಡು ಹಾಗೆ ಇದ್ದೆ ಎನ್ನುತ್ತಾರೆ ವಸಿಷ್ಠ. ಚಿತ್ರದಲ್ಲಿ ವಸಿಷ್ಠ ಲುಕ್ಕಿಗೆ ನಿರ್ದೇಶಕ ಜಿವಿಆರ್ ವಾಸು ಬಹಳ ಕೇರ್ ತೆಗೆದುಕೊಂಡಿದ್ದಾರಂತೆ. ಮೇಕಪ್ಪಿಗೆ ಒಂದು ಗಂಟೆ ಆಗುತ್ತಿತ್ತು ಎಂದಿರುವ ವಸಿಷ್ಠಗೆ ಇನ್ನೂ ಒಂದು ಖುಷಿ ಇದೆ.
ಹ್ಯಾಟ್ರಿಕ್ ಹೀರೋ ಜೊತೆಗೆ ಅವರದ್ದೊಂದು ಹ್ಯಾಟ್ರಿಕ್ ಆಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಶಿವಣ್ಣ ಜೊತೆ ಇದು ನನ್ನ 3ನೇ ಸಿನಿಮಾ. ಮಫ್ತಿ, ಟಗರು ನಂತರ ಈಗ ಕವಚ. ಅವರೊಂದು ರೀತಿ ನನಗೆ ಹಿರಿಯ ಅಣ್ಣನಿದ್ದಂತೆ ಎಂದಿದ್ದಾರೆ ವಸಿಷ್ಠ.