ಯೋಗರಾಜ್ ಭಟ್ಟರ ಪಂಚತಂತ್ರ ಚಿತ್ರ ಕಥೆ, ಪ್ರೀತಿ, ರೇಸ್ನಿಂದ ಮೋಡಿಯನ್ನೇ ಮಾಡಿದೆ. ಯುವ ಪ್ರೇಕ್ಷಕರನ್ನು ಸೆಳೆಯುತ್ತಿರುವ ಪಂಚತಂತ್ರ ಚಿತ್ರಕ್ಕೆ ಒಳ್ಳೆಯ ಓಪನಿಂಗೂ ಸಿಕ್ಕಿದೆ. ಪಂಚತಂತ್ರದ ಆಮೆ, ಮೊಲ ರೇಸ್ ಕಥೆಯನ್ನು ಇಷ್ಟು ಚೆಂದವಾಗಿ ಸಿನಿಮಾ ಮಾಡಬಹುದಾ ಎಂದು ಅಚ್ಚರಿ ಪಟ್ಟಿರುವುದು ಕನ್ನಡ ಪ್ರೇಕ್ಷಕರಷ್ಟೇ ಅಲ್ಲ, ತೆಲುಗು ಹಾಗೂ ಹಿಂದಿ ಚಿತ್ರರಂಗದವರೂ ಕೂಡಾ ಬೆರಗಾಗಿದ್ದಾರೆ.
ಹೀಗಾಗಿಯೇ ಪಂಚತಂತ್ರ ಚಿತ್ರದ ರೀಮೇಕ್ಗೆ ಡಿಮ್ಯಾಂಡ್ ಬರೋಕೆ ಶುರುವಾಗಿದೆ. ಭಟ್ಟರ ಚಿತ್ರಗಳು ಬೇರೆ ಭಾಷೆಗೆ ರೀಮೇಕ್ ಆಗುವುದು ಹೊಸದೇನಲ್ಲ. ಈ ಬಾರಿಯೂ ಅಷ್ಟೆ, ತೆಲುಗಿನಲ್ಲಿ ಆಗಲೇ ಆಂಧ್ರ ವರ್ಸಸ್ ತೆಲಂಗಾಣ ಅನ್ನೋ ಹೆಸರಲ್ಲಿ ಪಂಚತಂತ್ರ ರೀಮೇಕ್ ಆಗುತ್ತಿದೆ ಎಂಬ ಸುದ್ದಿಯಿದೆ.
ಒಟ್ಟಿನಲ್ಲಿ ಹೊಸಬರನ್ನೇ ಇಟ್ಟುಕೊಂಡು ಯೋಗರಾಜ್ ಭಟ್ಟರು ಮತ್ತೊಮ್ಮೆ ಗೆದ್ದಿದ್ದಾರೆ. ಶೃಂಗಾರದ ಹೊಂಗೇ ಮರ ಹೂ ಬಿಟ್ಟು, ಅರಳಿದೆ.