` ಮಕ್ಕಳ ಹಠದಿಂದಲೇ ಅಪ್ಪಳಿಸಿದ ಸಾವು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raname shooting tragedy
Ranam

ರಣಂ ಚಿತ್ರದ ಚಿತ್ರೀಕರಣ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ದುರಂತದ;ಲ್ಲಿ ತಾಯಿ ಸಮೀರಾ ಬಾನು ಹಾಗೂ ಅವರ ಮಗಳು 5 ವರ್ಷದ ಆಯೇಷಾ ಸ್ಥಳದಲ್ಲೇ ಮೃತಪಟ್ಟರು. ಸಮೀರಾ ಬಾನು ಶವ ಛಿದ್ರ ಛಿದ್ರವಾಗಿ ಎಲ್ಲೆಂದರಲ್ಲಿ ಬಿದ್ದಿತ್ತು. ಸ್ಫೋಟದ ರಭಸಕ್ಕೆ ಪುಟ್ಟ ಕಂದಮ್ಮ ಆಯೇಷಾ ಶವವಾಗಿ ಬಸ್ಸೊಂದರ ಕೆಳಗೆ ಬಿದ್ದಿದ್ದಳು. ಇನ್ನೊಂದು ಮಗು 8 ವರ್ಷದ ಜೈನೇಬ್ ಗಾಯಗೊಂಡು ಒದ್ದಾಡುತ್ತಿದ್ದಳು. 

ಸ್ಫೋಟದ ಶಬ್ಧ ಕೇಳಿ ಓಡಿ ಬಂದ ಸ್ಥಳೀಯರೇ ತಬ್ರೇಜ್ ಖಾನ್ ಹಾಗೂ ಇನ್ನೊಬ್ಬ ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ದುರಂತವೆಂದರೆ, ಘಟನೆಯಲ್ಲಿ  ಪತ್ನಿ ಮತ್ತು ಒಬ್ಬ ಮಗಳನ್ನು ಕಳೆದುಕೊಂಡಿರುವ ತಬ್ರೇಜ್ ಖಾನ್, ಶುಕ್ರವಾರದ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಕ್ಕಳು ಶೂಟಿಂಗ್ ನೋಡಲೆಂದು ಆಸೆ ಪಟ್ಟರು. ಬೇಡ ಬೇಡ ಎಂದರೂ ಮಕ್ಕಳಿಬ್ಬರೂ ಹಠ ಹಿಡಿದ ಕಾರಣ, ಅವರನ್ನು ಕರೆದುಕೊಂಡು ಶೂಟಿಂಗ್ ಸ್ಥಳಕ್ಕೆ ಬಂದಿದ್ದರು ತಬ್ರೇಜ್ ಖಾನ್. 

ಬಹುಶಃ ಮಕ್ಕಳ ಹಠಕ್ಕೆ ಮಣಿಯದೇ ಇದ್ದಿದ್ದರೆ, ನೇರ ಮನೆಗೇ ಹೋಗಿದ್ದರೆ ಬಚಾವಾಗುತ್ತಿದ್ದರೇನೋ.. ಆದರೆ ಸಾವು ಎಳೆದುಕೊಂಡು ಬಂದಿತ್ತು.

#

I Love You Movie Gallery

Rightbanner02_butterfly_inside

Yaana Movie Gallery