` ಭಟ್ಟರ ಪಂಚತಂತ್ರದ ಹೀರೋ ವಿಹಾನ್ ಅಲ್ಲ.. ರಂಗಾಯಣ ರಘು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rangayana raghu is the main attraction of panchatantra
Panchatantra

ಪಂಚತಂತ್ರ ರಿಲೀಸ್ ಹೊತ್ತಲ್ಲಿ ಇಡೀ ಚಿತ್ರತಂಡದಲ್ಲಿ, ಶೂಟಿಂಗ್ ನಡೆಯುತ್ತಿದ್ದ ಅಷ್ಟೂ ದಿನ ನಡೆದ ಗಲಾಟೆಯೊಂದು ಹೊರಬಿದ್ದಿದೆ. ಅದು ನಿರಂತರವಾಗಿ ನಡೆಯುತ್ತಲೇ ಇತ್ತು. ಅದು ಮಾರ್ಚ್ 29ರ ನಂತರವೂ ಕಂಟಿನ್ಯೂ ಆಗಲಿದೆ. ಹಿರಿಯ ಕಲಾವಿದ ರಂಗಾಯಣ ರಘು ಮತ್ತು ನಾಯಕ ನಟ ರೋಹನ್ ಮಧ್ಯೆ ಜಗಳ ನಿರಂತರವಾಗಿ ನಡೆದಿತ್ತಂತೆ...ಇಷ್ಟೆಲ್ಲ ಆಗಿ ಚಿತ್ರದ ಹೀರೋ ರಂಗಾಯಣ ರಘು. ಹೌದು ಸ್ವಾಮಿ.. ಇದನ್ನ ಹೇಳಿರೋದು ಬೇರೆ ಯಾರೋ ಅಲ್ಲ.. ಚಿತ್ರದ ಅಧಿಕೃತ ಹೀರೋ ವಿಹಾನ್.

ಅಯ್ಯೋ.. ಬಿಡಿ.. ಇಡೀ ಸಿನಿಮಾದ ಕಥೆ ಇರೋದೇ ನಮ್ಮ ಮತ್ತು ಅವರ ಮಧ್ಯೆ.. ಇಡೀ ಸಿನಿಮಾದಲ್ಲಿ ನಾವು ರಂಗಾಯಣ ರಘು ಪಾತ್ರದ ಜೊತೆ ಜಗಳ ಕಾಯ್ತೇವೆ. ಕಾಯ್ತಾನೇ ಇರ್ತೇವೆ. ಹೀಗಾಗಿ.. ನಮ್ಮ ಇಡೀ ಟೀಂ ಅವರ ಜೊತೆ ಜಗಳ ಮಾಡ್ತಾನೇ ಇತ್ತು. ಮಜವಾಗಿತ್ತು. ಹಾಗೆ ನೋಡಿದರೆ ರಂಗಾಯಣ ರಘು ಅವರೇ ಚಿತ್ರದ ಹೀರೋ. ಅಂತಹ ದೊಡ್ಡ ಕಲಾವಿದರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದಿದ್ದಾರೆ ವಿಹಾನ್.

ಹರಿಪ್ರಸಾದ್, ಜಯಣ್ಣ, ಪರಾಡ್ಕರ್ ನಿರ್ಮಾಣದ ಸಿನಿಮಾದ ಇನ್ನೊಬ್ಬ ಹೀರೋ ಯೋಗರಾಜ್ ಭಟ್. ಎಂದಿನಂತೆ ಅವರು ಟ್ರ್ಯಾಕ್ ಬದಲಿಸಿ ಬಂದಿದ್ದಾರೆ. ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಆಮೆ-ಮೊಲ ರೇಸ್ ಕಥೆಯ ಮಧ್ಯೆ ಒಂದು ಲವ್ ಸ್ಟೋರಿ ಇಟ್ಟಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery