ಎಲ್ಲರೂ ಡಾ.ರಾಜ್‍ಕುಮಾರ್, ರಜನಿಕಾಂತ್ ಆಗೋಕೆ ಸಾಧ್ಯವಿಲ್ಲ.. ಈ ಮಾತನ್ನು ಹೇಳಿದವರು ಬೇರೆ ಯಾರೋ ಅಲ್ಲ, ಶಿವರಾಜ್‍ಕುಮಾರ್. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾವಿದ ಶಿವಣ್ಣ, ಇದೇ ಮೊದಲ ಬಾರಿಗೆ ಕವಚ ಚಿತ್ರದಲ್ಲಿ ಅಂಧನಾಗಿ ನಟಿಸಿದ್ದಾರೆ. ಹಾಗೆ ನಟಿಸುವಾಗ ನಾನು ಮೀನಾಕ್ಷಿ ಎಂಬ ಪುಟ್ಟ ಬಾಲಕಿಯ ಅಭಿನಯ ನೋಡಿ ಕಲಿತಿದ್ದೇನೆ ಎಂದರು ಶಿವಣ್ಣ. ಹಾಗೆ ಹೇಳುತ್ತಲೇ ಅವರು ಈ ಮಾತು ಹೇಳಿದ್ದಾರೆ. ಎಲ್ಲರೂ ಡಾ.ರಾಜ್‍ಕುಮಾರ್, ರಜನಿಕಾಂತ್ ಆಗೋಕೆ ಸಾಧ್ಯವಿಲ್ಲ..
ಚಿತ್ರದಲ್ಲಿ ಅಂಧನಾಗಿ ನಟಿಸುವುದು ಒಂದು ಸವಾಲಾಗಿತ್ತು. ಮೋಹನ್‍ಲಾಲ್ ಅಭಿನಯದ ಕಾಲುಭಾಗದಷ್ಟು ಬಂದಿದ್ದರೂ ನಾನು ಗೆದ್ದಂತೆ ಎಂದಿರೋ ಶಿವಣ್ಣ, ಮುಂದೆಯೂ ರೀಮೇಕ್ ಸಿನಿಮಾ ಮಾಡುತ್ತೇನೆ. ಕಥೆ ಇಷ್ಟವಾಗಬೇಕು. ಹಾಗಂತ ಅದನ್ನೇ ಉದ್ಯೋಗ ಮಾಡಿಕೊಳ್ಳಲ್ಲ ಎಂದಿದ್ದಾರೆ.
ಜಿವಿಆರ್ ವಾಸು ನಿರ್ದೇಶನದ ಚಿತ್ರದಲ್ಲಿ ಇಶಾ ಕೊಪ್ಪಿಕರ್, ಕೃತಿಕಾ, ವಸಿಷ್ಠ ಸಿಂಹ ಮೊದಲಾದವರು ನಟಿಸಿದ್ದಾರೆ.