ಬಾಕ್ಸಾಫೀಸ್ನಲ್ಲಿ ಮಾಯೆ ಸೃಷ್ಟಿಸಿದ ಬೆಲ್ಬಾಟಂ ಚಿತ್ರದ ರೀಮೇಕ್ ಹಕ್ಕುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದುಬಿಟ್ಟಿದೆ. ಕಾರಣ, ಚಿತ್ರದ ಕಥೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಚಿತ್ರಕ್ಕೆ ಜಯತೀರ್ಥ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ.. ಎಲ್ಲದರಲ್ಲೂ ಇದ್ದ ಹೊಸತನ ಚಿತ್ರವನ್ನು ಗೆಲ್ಲಿಸಿದೆ.
ಹೀಗೆ ಸಂಭ್ರಮದ ತುತ್ತತುದಿಯಲ್ಲಿರುವಾಗಲೇ ಚಿತ್ರದ ರೀಮೇಕ್ ರೈಟ್ಸ್ಗಳಿಗೆ ವ್ಯಾಪಾರ ಕುದುರಿದೆ. ಮುಂಬೈನ ಪ್ರತಿಷ್ಠಿತ ಕೆ.ಎನ್.ಎಂಟರ್ಟೈನ್ಮೆಂಟ್ ಸಂಸ್ಥೆ ಬೆಲ್ಬಾಟಂನ ಹಿಂದಿ ಮತ್ತು ತೆಲುಗು ರೈಟ್ಸ್ಗಳನ್ನು 75 ಲಕ್ಷ ಕೊಟ್ಟ ಖರೀದಿಸಿದೆ ತೆಲುಗು ಮತ್ತು ಹಿಂದಿ ಎರಡರಲ್ಲೂ ಇದೇ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆಯಂತೆ.