` ಚಿತ್ರನಟನಿಂದ ಹುಡುಗಿಯ ಕಿಡ್ನಾಪ್ - ಮಾ.22, 1984 - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
this was memorable day in jaggesh's life
Jaggesh

ಕನ್ನಡ ಚಿತ್ರರಂಗದ ಉದಯೋನ್ಮುಖ ನಟ, ಜಗ್ಗೇಶ್ ಎಂಬ ಹೆಸರಿನ ಕಲಾವಿದ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದಾರೆ. ಮದುವೆಯಾಗಿದ್ದಾರೆ. ಹೀಗಾಗಿ ಚಿತ್ರನಟ ಜಗ್ಗೇಶ್ ವಿರುದ್ಧ ಅಪ್ರಾಪ್ತ ಬಾಲಕಿಯ ಅಪಹರಣದ ದೂರು ದಾಖಲಿಸಿಕೊಳ್ಳಲಾಗಿದೆ.

ಹೋಲ್ಡ್ ಆನ್.. ಇದು ಇವತ್ತಿನ ಕಥೆಯಲ್ಲ. 1984ನೇ ಇಸವಿಯ ಕಥೆ. ಅವತ್ತು ಮಾರ್ಚ್ 22. ಜಗ್ಗೇಶ್ ಪರಿಮಳಾ ಅವರನ್ನು ಮದುವೆಯಾದ ದಿನ. ಆ ದಿನದ ಪತ್ರಿಕೆಗಳಲ್ಲಿ ಜಗ್ಗೇಶ್ ಅವರ ಸುದ್ದಿಯೇ ಹೆಡ್‍ಲೈನ್. ಆ ದಿನದ ಮಟ್ಟಿಗೆ ನಟ ಜಗ್ಗೇಶ್, ಕಿಡ್ನಾಪರ್ ಆಗಿಬಿಟ್ಟಿದ್ದರು. ಅದಾದ ನಂತರ ಅವರು ತಮ್ಮ ಪ್ರೇಮಕಥೆಯನ್ನ ಸುಪ್ರೀಂಕೋರ್ಟ್‍ವರೆಗೂ ಕೊಂಡೊಯ್ದು, ವಾದ ಮಾಡಿ ಗೆದ್ದು, ಐತಿಹಾಸಿಕ ತೀರ್ಪು ಬರುವಂತೆ ಮಾಡಿದ್ದು ಬೇರೆಯದ್ದೇ ಕಥೆ. ಇಲ್ಲಿರೋದು ಸಂಜೆವಾಣಿ ಪತ್ರಿಕೆಯ ಹೆಡ್‍ಲೈನ್.

ಬದುಕು ಬದಲಾಗಿದೆ. ಅವತ್ತು ಉದಯೋನ್ಮುಖ ಕಲಾವಿದನಾಗಿದ್ದ ಜಗ್ಗೇಶ್ ಎಂಬ ನಟನಿಗೆ ವಯಸ್ಸಾಗಿದೆ. ಅವರ ಹೆಸರಿನ ಹಿಂದೆ ನವರಸನಾಯಕ ಎಂಬ ಬಿರುದು ಶಾಶ್ವತವಾಗಿದೆ. ಜಗ್ಗೇಶ್-ಪರಿಮಳಾಗೆ ಇಬ್ಬರು ಮಕ್ಕಳು. ಒಬ್ಬರಿಗೆ ಮದುವೆಯಾಗಿ ಮೊಮ್ಮಕ್ಕಳನ್ನೂ ನೋಡಿ ಅಜ್ಜ-ಅಜ್ಜಿಯಾಗಿದ್ದಾರೆ. ಲೈಫು ಹಿಂಗೇನೇ..kk

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery