ಮಿಸ್ಸಿಂಗ್ ಬಾಯ್ ಚಿತ್ರದ ನಿರ್ದೇಶಕ ರಘುರಾಮ್. ನಾಯಕ ಗುರುನಂದನ್. ನಾಯಕಿ ಅರ್ಚನಾ. ರಂಗಾಯಣ ರಘು ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಮ್ಯೂಸಿಕ್ಕಿದೆ. ನೈಜ ಘಟನೆ ಆಧಾರಿತ ಚಿತ್ರದ ನಿರ್ಮಾಪಕ ಕೊಲ್ಲ ಪ್ರವೀಣ್.
ಕೊಲ್ಲ ಪ್ರವೀಣ್ ಈ ಮೊದಲು ಕನ್ನಡದಲ್ಲಿ ಎರಡು ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಪುನೀತ್ ಅಭಿನಯದ ಪವರ್ ಸಿನಿಮಾ. ಗೋಲಿಸೋಡ ಎಂಬ ಪ್ರಯೋಗಾತ್ಮಕ ಚಿತ್ರವನ್ನೂ ನಿರ್ಮಿಸಿರುವ ಕೊಲ್ಲ ಪ್ರವೀಣ್, ಈ ಚಿತ್ರವನ್ನು ನಿರ್ಮಿಸಿದ್ದರ ಹಿಂದೆಯೂ ಒಂದು ಕಾರಣ ಇದೆ.
ಕಥೆ ಕೇಳಿದಾಗ ನನಗೆ ಇಷ್ಟವಾಗಿದ್ದು, ಚಿತ್ರದ ಭಾವನಾತ್ಮಕ ಸನ್ನಿವೇಶಗಳು. ರಘುರಾಮ್ ನನಗೆ ಹೇಗೆ ಕಥೆ ಹೇಳಿದ್ದರೋ, ಅದೇ ರೀತಿ ಚಿತ್ರ ಮಾಡಿಕೊಟ್ಟಿದ್ದಾರೆ. ಚಿತ್ರವನ್ನು ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಖಂಡಿತಾ ಈ ಚಿತ್ರ ಜನ ಮೆಚ್ಚುಗೆ ಗಳಿಸುತ್ತೆ ಎಂದಿದ್ದಾರೆ ಪ್ರವೀಣ್.