ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್.. ಇಬ್ಬರ ಫ್ಯಾನ್ಸ್ ಮಧ್ಯೆ ಡೈಲಾಗುಗಳ ಸಮರ, ಆನ್‍ಲೈನ್ ಹೋರಾಟ ಸದಾ ಜಾರಿಯಲ್ಲಿತ್ತು. ಆ ಎಲ್ಲ ಸಮರಗಳಿಗೆ ಏಕಾಏಕಿ ಬ್ರೇಕ್ ಹಾಕಿದ್ದಾರೆ ಇಬ್ಬರೂ ನಟರು.
ನಾವೇನೋ ಹಾವು ಮುಂಗುಸಿ ತರಾ ಕಿತ್ತಾಡ್ಕೊಂಡಿರ್ತಿದ್ವು. ಈಗ ಒಂದಾಗಿ ಬಂದ್ಬುಟ್ಟವ್ರೆ ಅಂತಾರೆ. ಸ್ವಾಮಿ.. ನಾವು ನಮ್ಮ ಹೊಟ್ಟೆಪಾಡು ನೋಡ್ಕೊತಿದ್ದೋ. ಇಲ್ಲಿಂದ ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಳ್ತಿದ್ವು. ಅನುಕೂಲಕ್ಕಾಗಿ.. ರಾತ್ರೋರಾತ್ರಿ ಬದಲಾಗುವವರು ನಾವಲ್ಲ ಎಂದು ಉತ್ತರ ಕೊಟ್ಟಿದ್ದಾರೆ ಯಶ್.
ಯಶ್ ಮಾತಿಗೆ ಪ್ರತಿಕ್ರಿಯೆ ಕೊಟ್ಟ ದರ್ಶನ್ ಹೇಳಿದ್ದಿಷ್ಟೆ, ನಮ್ ಹೀರೋ ಹೇಳಿದ್ದು ಅರ್ಥವಾಯ್ತಾ. ಅಷ್ಟೆ. ನಾವು ಚೆನ್ನಾಗಿದ್ದೇವೆ ಎಂದಿದ್ದಾರೆ ದರ್ಶನ್.