ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಬಿರುಸಾಗಿ ಸಾಗುತ್ತಿದ್ದರೆ, ಇನ್ನೊಂದೆಡೆ ಚಾರ್ಲಿ 777 ಚಿತ್ರೀಕರಣವೂ ಜೋರಾಗಿ ನಡೆಯುತ್ತಿದೆ. ರಕ್ಷಿತ್ ಶೆಟ್ಟಿ ಜೊತೆ ಈ ಚಿತ್ರದ ಇನ್ನೊಂದು ಹೀರೋ ನಾಯಿ. ಚಾರ್ಲಿ ಅನ್ನೋ ಹೆಸರಿನ ಮುದ್ದಾದ ನಾಯಿಯ ಕಥೆ ಚಿತ್ರದಲ್ಲಿದೆ. ಈಗ ಚಿತ್ರದ ಚಿತ್ರೀಕರಣಕ್ಕೆ ಇನ್ನಿಬ್ಬರು ಮರಿ ಸ್ಟಾರ್‍ಗಳ ಎಂಟ್ರಿ ಆಗಿದೆ. ಬೇಬಿ ಶಾರ್ವರಿ ಮತ್ತು ಪಾಣ್ಯ ಬಿ.ರಾವ್.
ಇವರಲ್ಲಿ ಶಾರ್ವರಿ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿ. ಪ್ರಾಣ್ಯ ಬಿ.ರಾವ್, ಡಬ್ ಸ್ಮಾಶ್ ಖ್ಯಾತಿ. ಶಾರ್ವರಿ, ಪುಟ್ಟ ರಕ್ಷಿತ್ ಶೆಟ್ಟಯಾಗಿ ಅಂದರೆ, ರಕ್ಷಿತ್ ಶೆಟ್ಟಿ ಬಾಲಕನಾಗಿದ್ದಾಗಿನ ಪಾತ್ರ ಮಾಡುತ್ತಿದ್ದರೆ, ಪ್ರಾಣ್ಯ, ತಂಗಿಯಾಗಿದ್ದಾರೆ.
ಕಿರಣ್ ರಾಜ್ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಆದಷ್ಟು ಶೀಘ್ರವಾಗಿ ಚಿತ್ರೀಕರಣ ಮುಗಿಸಿ, ಡಿಸೆಂಬರ್ ಹೊತ್ತಿಗೆ ಸಿನಿಮಾವನ್ನು ರಿಲೀಸ್ ಮಾಡುವ ಸನ್ನಾಹದಲ್ಲಿದೆ ಚಿತ್ರತಂಡ.