` ನಂಗೆ ಬಾಯ್ ಫ್ರೆಂಡ್ ಇಲ್ಲ - ಆ ಜಗಳ ನಂಗೆ ಗೊತ್ತಿಲ್ಲ - ರಾಗಿಣಿ ದ್ವಿವೇದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
i have no boyfriend says raginiq
Ragini

ಇತ್ತೀಚೆಗೆ ಕೆಲವು ಮೀಡಿಯಾಗಳಲ್ಲಿ ಒಂದು ಸುದ್ದಿ ಬ್ರೇಕ್ ಆಗಿತ್ತು. ನಟಿ ರಾಗಿಣಿಗಾಗಿ ಅವರ ಇಬ್ಬರು ಬಾಯ್‍ಫ್ರೆಂಡ್ಸ್ ರೆಸ್ಟೋರೆಂಟ್‍ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ತಕ್ಕಂತೆ ಘಟನೆ ನಡೆದಾಗ ಅದೇ ರೆಸ್ಟೋರೆಂಟ್‍ನಲ್ಲಿ ರಾಗಿಣಿ ಇದ್ದರು. ಅದಕ್ಕೆಲ್ಲ ಕಳಶವಿಟ್ಟಂತೆ ಅವರಿಬ್ಬರೂ ರಾಗಿಣಿಗೆ ಪರಿಚಿತರು. ಹೀಗಾಗಿ, ರಾಗಿಣಿಗಾಗಿಯೇ ಅವರ ಇಬ್ಬರು ಬಾಯ್‍ಫ್ರೆಂಡ್‍ಗಳು ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇವುಗಳಿಗೆಲ್ಲ ಸ್ವತಃ ರಾಗಿಣಿ ಉತ್ತರ ಕೊಟ್ಟಿದ್ದಾರೆ.

ನನಗೆ ಆ ಗಲಾಟೆ ಏನು ಎಂಬುದು ಗೊತ್ತಿಲ್ಲ. ನಾನು ರೆಸ್ಟೋರೆಂಟ್‍ಗೆ ಹೋಗಿದ್ದು ನಿಜ. ಆದರೆ, ನಾನು ನನ್ನ ಮುಂಬೈ ಫ್ರೆಂಡ್ಸ್ ಜೊತೆಗೆ ಹೋಗಿದ್ದೆ. ಅವರಿಬ್ಬರ ಜೊತೆ ಅಲ್ಲ. ಅವರಿಬ್ಬರೂ ನನಗೆ ಪರಿಚಿತರು. ಆದರೆ, ಭಾಯ್‍ಫ್ರೆಂಡ್ ಅಲ್ಲ. ನನಗೆ ಯಾವ ಬಾಯ್‍ಫ್ರೆಂಡೂ ಇಲ್ಲ. ನನಗಾಗಿ ಯಾರೂ ಜಗಳವನ್ನೂ ಮಾಡಿಕೊಂಡಿಲ್ಲ. ನಾನು ಗಾಂಧಿಗಿರಿ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದೇನೆ. ಸುಮ್ಮನೆ ನನ್ನ ಹೆಸರು ಎಳೆದು ತರಬೇಡಿ ಎಂದಿದ್ದಾರೆ ರಾಗಿಣಿ.

I Love You Movie Gallery

Rightbanner02_butterfly_inside

Paddehuli Movie Gallery