ಸೌಥ್ ಇಂಡಿಯಾ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ, ಮತ್ತೊಮ್ಮೆ ಲಿಪ್ ಲಾಕ್ ಮಾಡಿದ್ದಾರೆ. ಒನ್ಸ್ ಎಗೇಯ್ನ್ ವಿಜಯ್ ದೇವರಕೊಂಡ ಅವರ ಜೊತೆ. ಮತ್ತೊಮ್ಮೆ ತೆಲುಗು ಚಿತ್ರದಲ್ಲೇ. ತೆಲುಗಿನಲ್ಲಿ ಡಿಯರ್ ಕಾಮ್ರೇಡ್ ಎಂಬ ಚಿತ್ರಕ್ಕೆ ರಶ್ಮಿಕಾ-ವಿಜಯ್ ದೇವರಕೊಂಡ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಮಳೆಯಲ್ಲಿ ನೆನೆಯುವ ದೃಶ್ಯದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಲಿಪ್‍ಲಾಕ್ ಮಾಡಿದ್ದಾರೆ.
ಈ ಹಿಂದೆ ಗೀತಗೋವಿಂದಂ ಚಿತ್ರದಲ್ಲಿಯೂ ತುಟಿಗೆ ತುಟಿ ಬೆಸೆಯುವ ದೃಶ್ಯವಿತ್ತು. ಬಿಡುಗಡೆಗೆ ಮೊದಲೇ ಆ ದೃಶ್ಯ ಲೀಕ್ ಆಗಿತ್ತು. ನಂತರ ರಿಲೀಸ್ ಆದ ಕೆಲ ದಿನಗಳ ನಂತರ ಆ ದೃಶ್ಯವನ್ನು ಚಿತ್ರದಿಂದ ರಿಮೂವ್ ಮಾಡಲಾಗಿತ್ತು. ಅಫ್‍ಕೋರ್ಸ್.. ಆ ದೃಶ್ಯ ಈಗಲೂ ಆನ್‍ಲೈನ್‍ನಲ್ಲಿ ಸಿಗುತ್ತೆ.ಈಗ ಮತ್ತೊಮ್ಮೆ ಲಿಪ್ ಲಾಕ್ ಮಾಡಿದ್ದಾರೆ ರಶ್ಮಿಕಾ.