` ಕವಚದ ರೆಕ್ಕೆಗೆ ಬೆರಗಾದ ಕಿಚ್ಚ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kavacha song released by sudeep
Sudeep

ಕವಚ ಚಿತ್ರದ ರೆಕ್ಕೆಯಾ.. ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಬಿಡುಗಡೆ ಮಾಡಿರುವುದು ಕಿಚ್ಚ ಸುದೀಪ್. ಹಾಡನ್ನು ಕೇಳಿದ ಕಿಚ್ಚ ಹಾಡಿನ ಸಾಹಿತ್ಯಕ್ಕೆ ಬೆರಗಾಗಿ ಹೋಗಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಪ್ರತೀ ಸಾಲನ್ನೂ ಮೆಚ್ಚಿಕೊಂಡಿದ್ದಾರೆ.

ಅದು ಮಗುವಿನ ಮೇಲಿನ ಗೀತೆ. ಮಗಳನ್ನು ಅತಿಯಾಗಿ ಪ್ರೀತಿಸುವ ಕಿಚ್ಚ ಸುದೀಪ್‍ಗೆ ಹಾಡು ಇಷ್ಟವಾಗಿದ್ದರೆ, ಅಚ್ಚರಿಯೇನಿಲ್ಲ. ಹಾಡಿನ ಪ್ರತಿ ಫ್ರೇಮಿನಲ್ಲೂ ಶಿವಣ್ಣನ ಮುಗ್ಧ ಅಭಿನಯಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ ಸುದೀಪ್.

ಜಿವಿಆರ್ ವಾಸು ನಿರ್ದೇಶನದ ಕವಚ ಏಪ್ರಿಲ್ 5ಕ್ಕೆ ತೆರೆಕಾಣುತ್ತಿದೆ. ಶಿವಣ್ಣ 15 ವರ್ಷಗಳ ನಂತರ ನಟಿಸಿರುವ ರೀಮೇಕ್ ಚಿತ್ರ ಕವಚ.

Geetha Movie Gallery

Ombattane Dikku Launch Meet Gallery