ಕಿಚ್ಚ ಸುದೀಪ್ ಅವರನ್ನು ನೋಡಿದವರು ಇವರಿಗೇನ್ ಕಷ್ಟ ಇದೆ ಬಿಡಿ.. ಆರಾಮ್ ಇದ್ದಾರೆ ಎಂದುಕೊಂಡರೆ ಅದು ಸಹಜ. ತಮ್ಮ ವೈಯಕ್ತಿಕ ಭಾವನೆ, ಕಷ್ಟಸುಖಗಳನ್ನು ಕಣ್ಣ ಕೊನೆಯಲ್ಲಿ ಕಾಣದಂತೆ ನೋಡಿಕೊಳ್ಳುವ ಸುದೀಪ್, ಪರ್ಸನಲ್ ವಿಚಾರಗಳನ್ನ ಹೇಳಿಕೊಳ್ಳೋದು ಕಡಿಮೆ. ಆದರೆ ಈ ಬಾರಿ ಅವರು ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅಂದು ಮೈ ಆಟೋಗ್ರಾಫ್ ಚಿತ್ರಕ್ಕೆ ಕೈ ಹಾಕಿ, ಹಣವಿಲ್ಲದೆ ಪರದಾಡುತ್ತಿದ್ದೆ. ಆಗೆಲ್ಲ ಟಿವಿ ರೈಟ್ಸ್ 25ರಿಂದ 30 ಲಕ್ಷಕ್ಕೆ ಹೋದರೆ ಅದೇ ಹೆಚ್ಚು. ಆ ವೇಳೆ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ರಘುರಾಮ್, ನನ್ನ ಆ ಚಿತ್ರಕ್ಕೆ 1 ಕೋಟಿ ಕೊಡಿಸಿದ್ದರು. ಅದು ನನಗೆ ಬಹಳ ಸಹಾಯ ಮಾಡಿತ್ತು ಎಂದು ನೆನಪಿಸಿಕೊಂಡಿದ್ದಾರೆ ಸುದೀಪ್.
ಸುದೀಪ್ ಹೇಳಿದ ರಘುರಾಮ್ ಬೇರಾರೋ ಅಲ್ಲ, ಮಿಸ್ಸಿಂಗ್ ಬಾಯ್ ಚಿತ್ರದ ನಿರ್ದೇಶಕ. ಹೀಗಾಗಿಯೇ.. ಅಂದು ನೆರವು ನೀಡಿದ್ದ ರಘುರಾಮ್ ಚಿತ್ರವನ್ನು ಪ್ರೀತಿಯಿಂದ ಪ್ರಚಾರ ಮಾಡುತ್ತಿದ್ದಾರೆ ಸುದೀಪ್