ಬಹುದಿನಗಳ ನಿರೀಕ್ಷೆಯ ನಂತರ ಕನ್ನಡದ ಇಬ್ಬರು ಸ್ಟಾರ್‍ಗಳ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶಿವಣ್ಣ ಅಂಧನಾಗಿ ನಟಿಸಿರುವ ಕವಚ ಮತ್ತು ರವಿಚಂದ್ರನ್ ಲಾಯರ್ ಆಗಿ ನಟಿಸಿರುವ ದಶರಥ ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತಿವೆ. ಅಲ್ಲಿಗೆ, ಕನ್ನಡದಲ್ಲಿ ಬಹುದಿನಗಳ ಬಳಿಕ ಇಬ್ಬರು ಸ್ಟಾರ್‍ಗಳ ಚಿತ್ರಗಳು ಮುಖಾಮುಖಿಯಾಗಲಿವೆ.
17 ವರ್ಷಗಳ ಹಿಂದೆ ಅಂದರೆ 2002ರಲ್ಲಿ ಶಿವರಾಜ್‍ಕುಮಾರ್ ಮತ್ತು ರವಿಚಂದ್ರನ್ ಜೋಡಿಯ ಕೋದಂಡರಾಮ ತೆರೆ ಕಂಡಿತ್ತು. ಈಗ ಒಂದೇ ದಿನ ಇಬ್ಬರ ಚಿತ್ರಗಳು ತೆರೆ ಕಾಣುತ್ತಿವೆ. ಕವಚ ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶನವಿದ್ದರೆ, ದಶರಥನಿಗೆ ಎಂ.ಎಸ್.ರಮೇಶ್ ನಿರ್ದೇಶನವಿದೆ. ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಚಿತ್ರಗಳು, ಒಂದೇ ದಿನ ಬಿಡುಗಡೆಯಾಗುತ್ತಿರುವುದೇ ವಿಶೇಷ.