` ಜಗ್ಗೇಶ್ ಹುಟ್ದಬ್ಬಕ್ಕೆ ಫಸ್ಟ್ ತೋತಾಪುರಿ ನೋಡ್ಕಂಡ್ಬುಡಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
totapuri first look on jaggesh's birthday
Director Vijayprasad, Jaggesh

ಜಗ್ಗೇಶ್ ಅಭಿನಯದ, ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರ 100ನೇ ದಿನದತ್ತ ದಾಪುಗಾಲಿಟ್ಟಿದೆ. ಅರೇ.. ಏನ್ರೀ ಇದು.. ತೋತಾಪುರಿ ಸಿನಿಮಾ ಶೂಟಿಂಗೇ ಮುಗಿದಿಲ್ಲ ಅಂತೀರಾ..? ನಾವ್ ಹೇಳ್ತಿರೋದೂ ಅದೇ ಸ್ವಾಮಿ.. ಶೂಟಿಂಗ್ ಬಗ್ಗೆನೇ..

ಸಾಮಾನ್ಯವಾಗಿ ಜಗ್ಗೇಶ್ ಚಿತ್ರಗಳ ಶೂಟಿಂಗ್ ತುಂಬಾ ದಿನ ನಡೆಯಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ದಿನದಲ್ಲಿ ಶೂಟಿಂಗ್ ಮಾಡಿ ಎನ್ನುವುದು ಜಗ್ಗೇಶ್ ಪಾಲಿಸಿ. ಸದಾ ನಿರ್ಮಾಪಕರ ಜೇಬಿನ ಬಗ್ಗೆ ನಿಗಾ ಇಡುವ ನಟ ಜಗ್ಗೇಶ್, ಈ ಬಾರಿ 100ದಿನದ ಶೂಟಿಂಗಿಗೆ ಸಾಕ್ಷಿಯಾಗಿದ್ದಾರೆ. ಈಗಾಗಲೇ 80 ದಿನ ಶೂಟಿಂಗ್ ಮುಗಿಸಿರುವ ನಿರ್ದೇಶಕ ವಿಜಯ್ ಪ್ರಸಾದ್, ಫಸ್ಟ್ ಲುಕ್ ಹೊರಬಿಡಲು ರೆಡಿಯಾಗಿದ್ದಾರೆ.

ಇದು ನೀರ್ ದೋಸೆ ಕಾಂಬಿನೇಷನ್ ಸಿನಿಮಾ. ಜಗ್ಗೇಶ್, ಸುಮನ್ ರಂಗನಾಥ್, ದತ್ತಣ್ಣ ಮತ್ತೆ ಜೊತೆಯಾಗಿದ್ದಾರೆ.. ಅದೇ ವಿಜಯ್ ಪ್ರಸಾದ್ ಸಾರಥ್ಯದಲ್ಲಿ. ಮಾರ್ಚ್ 16ಕ್ಕೆ ಜಗ್ಗೇಶ್ ಹುಟ್ಟುಹಬ್ಬ. ನೋಡ್ಕೊಂಡ್‍ಬಿಡಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery