` ಸುಮಲತಾ ಪರ ಪ್ರಚಾರಕ್ಕೆ ಚರಣ್ ರಾಜ್ ರೆಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
charan raj to campaign for sumalatha
Sumalatha Ambareesh, Charan Raj

ಮಂಡ್ಯದಲ್ಲಿ ಸ್ಪರ್ಧಿಸಲು ರೆಡಿಯಾಗಿರುವ, ಈಗಾಗಲೇ ಮಂಡ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ನಾನು ಹೋಗುತ್ತೇನೆ ಎಂದು ಘೋಷಿಸಿದ್ದಾರೆ ನಟ ಚರಣ್ ರಾಜ್. ಅಂಬರೀಷ್ ನನಗೆ ಅಣ್ಣನಿದ್ದ ಹಾಗೆ. ಅವರ ಮನೆಯಲ್ಲಿ ಅನ್ನ ತಿಂದಿದ್ದೇನೆ. ಅಂಬರೀಷ್‍ಗಾಗಿ ನಾನು ಸುಮಲತಾ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ ಚರಣ್ ರಾಜ್.

ಸುಮಲತಾ ಜೊತೆ ಕನ್ನಡದಲ್ಲಿ ನಟಿಸಿದ ಹೀರೋಗಳಲ್ಲಿ ಚರಣ್‍ರಾಜ್ ಕೂಡಾ ಒಬ್ಬರು. ಚರಣ್ ರಾಜ್-ಸುಮಲತಾ ಜೋಡಿಯ ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ.. ಹಾಡು ಕನ್ನಡ ಚಿತ್ರರಸಿಕರ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು.