` ಕವಚ ರಿಲೀಸ್ ಏ.5ಕ್ಕೆ ಫಿಕ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kavacha to release on april 5th
Kavacha

2018ರ ಡಿಸೆಂಬರ್‍ನಲ್ಲಿಯೇ ರಿಲೀಸ್ ಆಗಬೇಕಿದ್ದ ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಏಪ್ರಿಲ್ 5ಕ್ಕೆ ಕವಚ ರಿಲೀಸ್ ಆಗುತ್ತಿದೆ.

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬವಾದ ಕಾರಣ, ರಿಲೀಸ್ ವಿಳಂಬವಾಯ್ತು ಎಂದು ಸ್ಪಷ್ಟನೆ ಕೊಟ್ಟಿದೆ ಚಿತ್ರತಂಡ. ಹಲವು ವರ್ಷಗಳ ನಂತರ ಶಿವಣ್ಣ ನಟಿಸಿರುವ ರೀಮೇಕ್ ಸಿನಿಮಾ ಇದು. ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿದ್ದಾರೆ ಶಿವಣ್ಣ. ರಾಮ್‍ಗೋಪಾಲ್ ವರ್ಮಾ ಬಳಿ ಸಹನಿರ್ದೇಶಕರಾಗಿದ್ದ ಜಿವಿಆರ್ ವಾಸು, ಈ ಚಿತ್ರದ ನಿರ್ದೇಶಕ.

ಇಶಾ ಕೊಪ್ಪಿಕರ್, ಕೃತಿಕಾ, ರವಿಕಾಳೆ, ರಾಜೇಶ್ ನಟರಂಗ ಮೊದಲಾದರು ನಟಿಸಿರುವ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್. ಬೇಬಿ ಮೀನಾಕ್ಷಿ ಪ್ರಮುಖ ಪಾತ್ರಧಾರಿ.